ತಾಳಿಕೋಟಿ

ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ಎಸ್ ಪಾಟೀಲರಿಗೆ ಸನ್ಮಾನ

ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ಎಸ್ ಪಾಟೀಲರಿಗೆ ಸನ್ಮಾನ

ತಾಳಿಕೋಟಿ  15: ವಿಜಯಪುರ ಕೇಂದ್ರ ಸಹಕಾರಿ ಬ್ಯಾಂಕನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಎಸ್‌. ಪಾಟೀಲ್ ಯಾಳಗಿ ಇವರನ್ನು ಪುರಸಭೆ ಮಾಜಿ ಸದಸ್ಯ ಕಾಂಗ್ರೆಸ್ ಯುವ ಮುಖಂಡ ವಿಜಯಸಿಂಗ ಹಜೇರಿ ತಮ್ಮ ಮಿತ್ರ ಬಳಗದೊಂದಿಗೆ ಸೇರಿ ಅವರನ್ನು ಸನ್ಮಾನಿಸಿ ಗೌರವಿಸಿದರು .ಇತ್ತೀಚಿಗೆ ವಿಡಿ ಸಿಸಿ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಒಟ್ಟು 11 ಸ್ಥಾನಗಳಲ್ಲಿ  10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು ಕೇವಲ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು ಮುದ್ದೇಬಿಹಾಳ ಭಾಗದ ಒಂದು ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಬಿ .ಎಸ್‌. ಪಾಟೀಲ ಯಾಳಗಿ ಹಾಗೂ  ನಾಲತವಾಡದ  ಮುತ್ತು ಗೌಡ ಅಂಗಡಿ  ಸ್ಪರ್ಧಿಸಿದ್ದರು ಒಟ್ಟು 40 ಮತಗಳಲ್ಲಿ 28 ಮತಗಳನ್ನು ಪಡೆದ ಬಿ ಎಸ್ ಪಾಟೀಲ್ ಯಾಳಗಿ ಅವರು ಆಯ್ಕೆಯಾದರು .ಇವರನ್ನು ಕಾಂಗ್ರೆಸ್ ಯುವ ಮುಖಂಡ ವಿಜಯ್ ಸಿಂಗ ಹಜೇರಿ ಅವರು ತಮ್ಮ ಮಿತ್ರರೊಂದಿಗೆ ಸೇರಿ ಸನ್ಮಾನಿಸಿದರು ಈ ಸಮಯದಲ್ಲಿ ಗುರು ಹಿರೇಮಠ .ವಿಶ್ವನಾಥ್ ಹಿರೇಮಠ್‌. ಅಪ್ಪಣ್ಣ ಸರೂರ. ವಿಕ್ರಂ ಅಗರ್ವಾಲ್‌. ವಿಜಯ್ ಕುಮಾರ ಕಲಾಲ .ಸಂತೋಷ್ ಗಾಯಕ್ವಾಡ್ ಹಾಗೂ ಖಾಜಾ ಪಟೇಲ್ ಮೊಕಾಶಿ ಇದ್ದರು. 


ಸುದ್ದಿ ಓದಿ