ಕು.ಸೌಮ್ಯಾ ಬಡಿಗೇರಗೆ ಸನ್ಮಾನ
ಸಿಂದಗಿ 22: ತಾಲೂಕಿನ ಬಂದಾಳ ಗ್ರಾಮದ ಬಸವರಾಜ ಬಡಿಗೇರ ಅವರ ಪುತ್ರಿ ಕು.ಸೌಮ್ಯಾ ಬಸವರಾಜ ಬಡಿಗೇರ ವಿದ್ಯಾರ್ಥಿನಿಯು 2022ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 91ಅ ಅಂಕಗಳನ್ನು ಪಡೆಯುವ ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗಿರುತ್ತಾಳೆ. ಅಲ್ಲದೇ ವಿದ್ಯಾರ್ಥಿನಿ ಕು.ಸೌಮ್ಯಾ ಬಸವರಾಜ ಬಡಿಗೇರ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದುವ ಮೂಲಕ ಸಿಂದಗಿ ಪಟ್ಟಣದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆಗೆ ಕೀರ್ತಿ ತಂದಿರುತ್ತಾಳೆ.
ವಿದ್ಯಾರ್ಥಿನಿಯ ಸಾಧನೆ ಗುರುತಿಸಿ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಶಿರಸಂಗಿಯಲ್ಲಿ ಶ್ರೀ ವಿಶ್ವರ್ಕಮ ವಿಕಾಸ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕು.ಸೌಮ್ಯಾ ಬಡಿಗೇರ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.