ಬೈಲಹೊಂಗಲ

ನಿವೃತ ಯೋಧನಿಗೆ ಸತ್ಕಾರ

ನಿವೃತ ಯೋಧನಿಗೆ ಸತ್ಕಾರ
ಬೈಲಹೊಂಗಲ ಸಮೀಪದ ದೇವಲಾಪೂರ ಗ್ರಾಮದಲ್ಲಿ ಬಿಎಸ್‍ಎಪ್ ಯೋಧ ಸದಾಶಿವ ಚಂದ್ರಪ್ಪ ತಮ್ಮಣ್ಣವರ ಅವರನ್ನು ಸತ್ಕರಿಸಲಾಯಿತು.

ಬೈಲಹೊಂಗಲ 06: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ನಿವೃತ ಬಿಎಸ್‍ಎಪ್ ಯೋಧ ಸದಾಶಿವ ಚಂದ್ರಪ್ಪ ತಮ್ಮಣ್ಣವರ ಅವರನ್ನು ದಲಿತ ಸಮುದಾಯದ ಆಶ್ರಯದಲ್ಲಿ ದೇವಲಾಪೂರ ಗ್ರಾಮದ ಸಮುದಾಯ ಭವನದಲ್ಲಿ ಸತ್ಕರಿಸಲಾಯಿತು. 

ರಾಷ್ಟ್ರದ ವಿವಿಧೆಡೆ ಗಡಿ ಪ್ರದೇಶದಲ್ಲಿ ಸುಮಾರು 35 ವರ್ಷಗಳ ಕಾಲ ಸುಧೀರ್ಘವಾಗಿ ಬಿಎಸ್‍ಎಪ್‍ನಲ್ಲಿ ಯೋಧರಾಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಪ್ರಯುಕ್ತ ಸದಾಶಿವ ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾಶಿವ ಅವರು ಅಲ್ಲಿನ ರೋಚಕ ಘಟನೆಗಳ ಬಗ್ಗೆ ವಿವರಿಸಿದರು. ರಾಜ್ಯ ಅಹಿಂದ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ತಮ್ಮಣ್ಣವರ, ದಲಿತ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಸುದ್ದಿ ಓದಿ