ಮುಸ್ಲಿಂ ಬ್ಯಾಂಕ್‌ದಿಂದ ಸಚಿವ ಶಿವಾನಂದರಿಗೆ ಸನ್ಮಾನ
ತಾಳಿಕೋಟಿ 17: ಪಟ್ಟಣದ ಪ್ರತಿಷ್ಠಿತ ಮುಸ್ಲಿಂ ಕೋ ಆಪರೇಟಿವ ಬ್ಯಾಂಕ್ ಇದರ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ. ಶಾಸಕ ಅಪ್ಪಾಜಿ ನಾಡಗೌಡ .ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ ಯಾಳಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಅಭಿನಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಈ ಮೂವರು ಗೌರವಾನ್ವಿತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಚಿವ ಶಿವನಂದ್ ಪಾಟೀಲ್ ಹಾಗೂ ಶಾಸಕ ಅಪ್ಪಾಜಿ ನಾಡಗೌಡ ಅವರು ಇಂದು ನೀವು ನೀಡಿದ ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ನಾವು ಅಧಿಕಾರವನ್ನು ನಿಮ್ಮ ಸೇವೆಗಾಗಿ ಸಿಕ್ಕ ಅವಕಾಶ ಎಂದು ಭಾವಿಸುತ್ತೇವೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ನಮಗೆಲ್ಲರಿಗೆ ನಿಮ್ಮ ಪ್ರೀತಿಯ ಆಶೀರ್ವಾದ ಹಾಗೂ ಸಹಕಾರ ಬೇಕು ಎಂದರು.
ಈ ಸಮಯದಲ್ಲಿ ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ದಾದಾಪೀರ ಚೌಧರಿ. ಉಪಾಧ್ಯಕ್ಷ ರಫೀಕ ಬೇಪಾರಿ. ನಿರ್ದೇಶಕ ಇಬ್ರಾಹಿಂ ಮನ್ಸೂರ. ಆದಮ್ ಸಾಬ್ ಅತ್ತಾರ. ಫಯಾಜ್ ಉತ್ತನಾಳ ಚಂದಾ ಹುಸೇನ ಖಾಂಜಾದೆ ಶಫೀಕ ಇನಾಮ್ದಾರ್. ಕಾಂಗ್ರೆಸ್ ಮುಖಂಡರಾದ ಜಿ.ಎಸ್ .ಕ ಶೆಟ್ಟಿ ಸಿದ್ದನಗೌಡ ಪಾಟೀಲ ನಾವದಗಿ.ಕಾಸಿಮ್ ಪಟೇಲ್ ಪಾಟೀಲ ಮೂಕೀಹಾಳ. ಬ್ಯಾಂಕಿನ ವ್ಯವಸ್ಥಾಪಕ ಎನ್.ಎ. ಕಾಜಿ .ಸಿಬ್ಬಂದಿ ಡಾಲಾಯತ್ ಹಾಗೂ ಮತ್ತಿತರರು ಇದ್ದರು.