ವಿಜೇತರಾದ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಿಗೆ ಸನ್ಮಾನ
ಹೊಸಪೇಟೆ 31: ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಿಗೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರುಗಳಾದ ಬಿ.ನಾರಾಯಣ, ವಿ.ಹುಲುಗಪ್ಪ, ಕನಕಮ್ಮ, ಮುನ್ನಿ, ರೋಹಿಣಿ ವೆಂಕಟೇಶ್, ಅಸ್ಲಾಮ್ ಮಾಳ್ಗಿ, ಕೆ.ಮಹೇಶ್ಕುಮಾರ್ ಹೆಚ್.ರಾಘವೇಂದ್ರ, ಹೆಚ್.ಕೆ.ಮಂಜುನಾಥ, ಪರಗಂಟಿ ಲಕ್ಷ್ಮಿ ಚಂದ್ರಶೇಖರ್, ಜಿ.ರಾಧ ಗೂಡಗಂಟಿ ಮಲ್ಲಿಕಾರ್ಜುನ ರವರುಗಳಿಗೆ ಹೃತ್ಪೂರ್ವಕ ಅಭಿನಂಧನೆಗಳನ್ನು ಸಲ್ಲಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಜ್ಜಲ್ ನಾಗರಾಜ, ಗುಜ್ಜಲ್ ರಘು, ನಿಂಬಗಲ್ ರಾಮಕೃಷ್ಣ, ಬಾಣದ ಗಣೇಶ್, ವೀರಭದ್ರನಾಯಕ, ಲಿಂಗಣ್ಣ ನಾಯಕ, ವಕೀಲರಾದ ಕೆ.ಮಹೇಶ್ಕುಮಾರ್, ಎಸ್.ಪಿ.ಬಸವರಾಜ, ಈಶ್ವರ್, ಎರಿ್ರಸ್ವಾಮಿ, ಅಂಜಿನಿ, ಲಿಂಗಣ್ಣ ನಾಯಕ, ವೆಂಕಟೇಶ್, ಮೂಲೆಮನೆ ಎರಿ್ರಸ್ವಾಮಿ, ಎಸ್.ಬಿ.ರಾಘವೇಂದ್ರ, ಖಾರದಪುಡಿ ಮಹೇಶ್ಕುಮಾರ್, ರಾಜಾಸಾಬ್ ಮತ್ತು ಇನ್ನಿತರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭಾಗವಹಿಸಿದ್ದರು.