ಸಂಕೇಶ್ವರ

ಲೆಫ್ಟಿನೆಂಟ್ ವಿನಾಯಕ ಶಂಕರ ಹೆಬ್ಬಾಳೆಗೆ ಸತ್ಕಾರ

ಲೆಫ್ಟಿನೆಂಟ್ ವಿನಾಯಕ ಶಂಕರ ಹೆಬ್ಬಾಳೆಗೆ ಸತ್ಕಾರ

ಸಂಕೇಶ್ವರ 14: ಭಾರತೀಯ ಸೇನೆಗೆ ಅಧಿಕಾರಿಯಾಗಿ ನೇಮಕಗೊಂಡ ಲೆಫ್ಟಿನೆಂಟ್ ವಿನಾಯಕ ಶಂಕರ ಹೆಬ್ಬಾಳೆ ಅವರನ್ನು ಶಂಕರಲಿಂಗ ಸಮುದಾಯ ಭವನದಲ್ಲಿ ಸತ್ಕರಿಸಲಾಯಿತು. 

ನಿಡಸೋಶಿಯ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು. ನಗರದ ವೀರಶೈವ ಸಮಾಜದ ಉಪಾಧ್ಯಕ್ಷ ಅಣ್ಣಾಸಾಹೇಬ ಪರ್ವತರಾವ, ಹಾಗೂ ಚಿಕ್ಕ ಮಕ್ಕಳ ಹಿರಿಯ ತಜ್ಞರಾದ ಡಾ. ನಂದಕುಮಾರ ಹಾವಳ, ಪವನ ಕತ್ತಿ, ಪುರಸಭೆಯ ಮಾಜಿ ಅಧ್ಯಕ್ಷ ಬಂಡು ಹತನೂರೆ, ಪುರಸಭೆ ಉಪಾಧ್ಯಕ್ಷರಾದ ಅಜೀತ ಕರಜಗಿ, ಗಜಾನನ ಕ್ವಳ್ಳಿ, ಹಿಡಕಲ್ ಡ್ಯಾಮನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ ರಾಜೇಂದ್ರ ಪಾಟೀಲ ಪುರಸಭೆಯ ಸದಸ್ಯರಾದ ಸುನೀಲ ಅಣ್ಣಾಸಾಹೇಬ ಪರ್ವತರಾವ, ರಾವಸಾಹೇಬ ದೇಸಾಯಿ, ನಂದು ಮುಡಸಿ, ರೋಹನ ನೇಸರಿ, ಮಂದಾರ ಹಾವಳ, ಮಾಜಿ ಸೈನಿಕರಾದ ಅಶೋಕ ಪಾಟೀಲ, ವ್ಹಿ.ಕೆ. ಮಲಕಟ್ಟಿ, ಮಹಾದೇವ ಕೇಸರಕರ, ಅಪ್ಪಾಸಾಹೇಬ ಪಾಟೀಲ (ಹುಲ್ಲೋಳಿ) ಹಾಗೂ ನಗರದ ಮೊದಲಾದ ಗಣ್ಯ ವ್ಯಕ್ತಿಗಳು ವಿನಾಯಕ ಹೆಬ್ಬಾಳೆ ಇವರಿಗೆ ಹೂವು ಗುಚ್ಛೆ ಹಾಗೂ ಹೂಮಾಲೆ ಅವರ ಕೊರಳಿಗೆ ಹಾಕಿ ಅವರನ್ನು ಸತ್ಕರಿಸಲಾಯಿತು, ಇವರು ಬೆಲ್ಲದ ಬಾಗೇವಾಡಿ ಅರ್ಬನ ಬ್ಯಾಂಕಿನ ಶಂಕರ ಹೆಬ್ಬಾಳಿ ಸಿಪಾಯಿಯವರ ಸುಪುತ್ರ ಇದ್ದಾರೆ. 


ಸುದ್ದಿ ಓದಿ