ಸೇವಾ ನಿವೃತ್ತಿ ಹೊಂದಿದ ಶಾಲಿನಿ ನಾಯಕ್‌ಗೆ ಸನ್ಮಾನ
ರಾಣೆಬೆನ್ನೂರು 04: ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದರಾಜಾರಾಜೇಶ್ವರಿ ಪ್ರೌಢಶಾಲೆಯಇಂಗ್ಲಿಷ್ ಭಾಷಾ ಶಿಕ್ಷಕಿ ಶಾಲಿನಿ ನಾಯಕ್‌ಅವರ ನಿವಾಸದಲ್ಲಿ ಭಾನುವಾರ ರಾಣೆಬೆನ್ನೂರುತಾಲ್ಲೂಕಆಂಗ್ಲಭಾಷಾ ಶಿಕ್ಷಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಶಾಲಿನಿ ನಾಯಕ್ ಮಾತನಾಡಿ, ಸರ್ಕಾರಿ ನಿಯಮಗಳಂತೆ ನಿವೃತ್ತಿ ಹೊಂದಿದ್ದೇನೆಯೇ ಹೊರೆತು ಮಾನಸಿಕವಾಗಿ ನಿವೃತ್ತಿಯಾಗಿಲ್ಲ. ನನ್ನ ವೃತ್ತಿಜೀವನದಜ್ಞಾನ ಅನುಭವವನ್ನು ಮಕ್ಕಳಿಗೆ ತಲುಪಿಸುವ ಇಚ್ಛೆ ಹೊಂದಿದ್ದೇನೆಎಂದರು.
ಆಡಳಿತ ಮಂಡಳಿ ಹಾಗೂ ಇಲಾಖೆ ಸೇವೆಯನ್ನು ಗುರುತಿಸಿ ಗೌರವಿಸಿದೆ.ಸಾವಿರಾರು ವಿದ್ಯಾರ್ಥಿಗಳ ಬದುಕು ಬೆಳೆಗಿದ ಸಾರ್ಥಕತ ೆದೊರೆತಿದೆ.ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಮೂವತ್ತು ವರ್ಷಗಳ ಸೇವೆ ತೃಪ್ತಿತಂದಿದೆಎಂದರು.
ಹಾವೇರಿ ಜಿಲ್ಲಾ ಆಂಗ್ಲಭಾಷಾ ಶಿಕ್ಷಕರ ವೇದಿಕೆ ಅಧ್ಯಕ್ಷಎಸ್.ಆರ್.ತೆವರಿ ಮಾತನಾಡಿ, ಬದುಕಿನ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ತಾಲ್ಲೂಕಿನ ಅಪಾರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದ್ದಾರೆ. ಅವರ ಸೇವೆ ಮತ್ತುಅನುಭವ ಮುಂದುವರೆಯಲಿ ಎಂದು ವಿಶ್ರಾಂತಜೀವನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲಿ ್ಲರಾಣೆಬೆನ್ನೂರುತಾಲ್ಲೂಕಆಂಗ್ಲಭಾಷಾ ಶಿಕ್ಷಕರ ಸಂಘದ ನೂತನಅಧ್ಯಕ್ಷಜಗದೀಶ ಮಳೀಮಠ, ಸಿ.ಬಿ.ಗುರ್ಜೇರ, ಸಂಭ್ರಮ್ ನಾಯಕ್, ಸಂಕ್ರಮಣ ನಾಯಕ್, ವಿವೇಕಾನಂದ.ಜಿ.ಬಿ., ಎನ್.ಎ.ಕೋಡದ, ಆನಂದ ದೇವರಮನಿ, ವಕೀಲ ಪಿ.ಎಲ್.ಹಿರೇಗೌಡ್ರ, ಶೈಲಜಾ ಸಂಗಾಪುರ, ಎಸ್.ಆರ್.ಕುಲಕರ್ಣಿ, ಸೂರಲಿಂಗಯ್ಯ.ಎನ್., ಲಲಿತಾ ಲಮಾಣಿಇದ್ದರು.