ರಾಣೆಬೆನ್ನೂರ

ನಿವೃತ್ತ ಯೋಧ ಜಯಪ್ರಕಾಶ ಮೇಟಿಗೆ ಸನ್ಮಾನ

ನಿವೃತ್ತ ಯೋಧ ಜಯಪ್ರಕಾಶ  ಮೇಟಿಗೆ ಸನ್ಮಾನ

ರಾಣೇಬೆನ್ನೂರು 27: ತಮ್ಮ ಕುಟುಂಬವನ್ನೇ ತ್ಯಜಿಸಿ ದೇಶದ ರಕ್ಷಣೆಗೆ ಜೀವವನ್ನೇ ಮುಡುಪಾಗಿಟ್ಟು  ಹಗಲಿರುಳು ಸೇವೆ ಸಲ್ಲಿಸುತ್ತಿರುವ ಯೋಧರ ಕಾರ್ಯ ಸ್ಮರಣೀಯವಾದುದು ಎಂದು ರಾಜ್ಯ ನೇಕಾರ ಪ್ರಕೋಷ್ಠ ಸಂಚಾಲಕ ಡಾ. ಬಸವರಾಜ ಕೇಲಗಾರ ಹೇಳಿದರು. 

ನಗರದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ನೇಕಾರ ಪ್ರಕೋಷ್ಠದ ವತಿಯಿಂದ ಕಾರ್ಗಿಲ್ ವಿಜಯೋತ್ಸ ನಿಮಿತ್ಯ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಜಯಪ್ರಕಾಶ ಅಂದಾನೆಪ್ಪ ಮೇಟಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. 

 ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅನೇಕ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿ ಇಡೀ ಭಾರತೀಯರ ಹೃದಯದಲ್ಲಿ ಅಮರರಾಗಿ ನೆಲೆಸಿದ್ದಾರೆ. ಅಂತಹವರ ನೆನಪಿಗೊಸ್ಕರ ಯೋಧರನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು.  

 ಜಿಲ್ಲಾ ಸಂಚಾಲಕ ಶಿವಾನಂದ ಬಗಾದಿ, ತಾಲೂಕ ಸಂಚಾಲಕ ರಾಮಣ್ಣ ಕಾಕಿ, ದ್ಯಾಮಣ್ಣ ಸುಂಕಾಪುರ, ವಿಶಾಲ ಗುಪ್ತಾ, ನಿವೃತ್ತ ಸೈನಿಕ ನಾಗೇಶ ತಳವಾರ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ