ಬೈಲಹೊಂಗಲ

ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮಾಳೋದೆಗೆ ಸನ್ಮಾನ

ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮಾಳೋದೆಗೆ ಸನ್ಮಾನ
ಬೈಲಹೊಂಗಲ ಬಿಜೆಪಿ ಕಚೇರಿಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮುರಳೀಧರ ಮಾಳೋದೆ ಅವರನ್ನು ಮಾಜಿ ಶಾಸಕ ಜಗದೀಶ ಮೆಟಗು

ಬೈಲಹೊಂಗಲ 25: 1975 ಜೂನ್ 25ರಂದು  ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಮರೆಯಲಾಗದಂತಹ ಕರಾಳ ದಿನವಾಗಿ ದಾಖಲಾಗಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. 

ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ   ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 46 ವರ್ಷಗಳು ಪೂರ್ಣಗೊಂಡಿದ್ದರ ಹಿನ್ನಲೆಯಲ್ಲಿ ಕರಾಳ ದಿನಾಚಾರಣೆಯಲ್ಲಿ ಭಾಗವಹಿಸಿದ ಮುರಳಿಧರ ಮಾಳೋದೆ ಅವರನ್ನು ಸನ್ಮಾನಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ ಸುನಿಲ್ ಮರಕುಂಬಿ, ಸಂತೋಷ ಹಡಪದ, ಜಗದೀಶ ಬೂದಿಹಾಳ ಮಹಾಂತೇಶ ಹೊಸಮನಿ, ಸುಭಾಷ ತುರಮರಿ, ಲಕ್ಕಪ್ಪ ಕಾರಗಿ, ಪುರಸಭೆ ಸದಸ್ಯ ಸಾಗರ ಭಾವಿಮನಿ, ದಯಾನಂದ ಪರಾಳಶೆಟ್ಟರ, ಸಚಿನ್ ಕಡಿ, ಮಂಜುನಾಥ್ ಮರಶೆಟ್ಟಿ, ಗೌಡಪ್ಪ ಹೊಸಮನಿ, ಗುರುಪಾದ ಅಂಗಡಿ, ಪವನ್ ಅಕ್ಕಿ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇದ್ದರು. 

ಸುದ್ದಿ ಓದಿ