ಎಲಬುರ್ಗ

ದೊಡ್ಡಬಸವಗೌಡ ಬಯ್ಯಾಪೂರಗೆ ಸನ್ಮಾನ

ದೊಡ್ಡಬಸವಗೌಡ ಬಯ್ಯಾಪೂರಗೆ ಸನ್ಮಾನ

ಯಲಬುರ್ಗಾ 20: ಇತ್ತೀಚೆಗೆ ನಡೆದ ಕೊಪ್ಪಳ, ರಾಯಚೂರು ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪೂರರವರಿಗೆ ಯಲಬುರ್ಗಾದಲ್ಲಿ ಭಾನುವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಈ ಸಂದರ್ಭದಲ್ಲಿ ಕುಷ್ಟಗಿಯ ಯುವ ಮುಖಂಡ ದೊಡ್ಡಬಸವಗೌಡ ಅಮರೇಗೌಡ ಬಯ್ಯಾಪೂರ ಅವರಿಗೆ ಯಲಬುರ್ಗಾ ಹಾಗೂ ಕುಕನೂರು ತಾಲೂಕಾ ಬ್ಲಾಕ್ ಕಾಂಗ್ರೇಸ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ದೊಡ್ಡಬಸವಗೌಡ ಅಮರೇಗೌಡ ಬಯ್ಯಾಪೂರ ಮಾತನಾಡಿ ಈ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಹೊಸ ರಾಜಕೀಯ ಮನ್ವಂತರ ಆರಂಭವಾಗಿದ್ದು ಈ ದಿಶೆಯಲ್ಲಿ ಮುಂಬರುವ 2023ರ ಸಾರ್ವಜನಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಸತ ಸಿದ್ಧ ಎಂದರು. ಮುಖ್ಯವಾಗಿ ಜನಸಾಮಾನ್ಯರು ಬಿಜೆಪಿ ದುರಾಡಳಿತದ ವಿರುದ್ಧ ದಂಗೆ ಎದ್ದಿದ್ದಾರೆ ಎಂದರು. 

ಮಾಜಿ ಮಂತ್ರಿ ಬಸವರಾಜ ರಾಯರಡ್ಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವೆಂಕಣ್ಣ ಯರಾಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆರಬಸಪ್ಪ ನಿಡಗುಂದಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಣ್ಣ ಸಾಲಭಾವಿ ವಕೀಲರು ಯುವ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಜಿ. ನಿಂಗೋಜಿ, ಆನಂದ ಉಳ್ಳಾಗಡ್ಡಿ, ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ