ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರಿಗೆ ಸನ್ಮಾನ
ಬೈಲಹೊಂಗಲ 5: ಕೋವಿಡ್ 19 ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿರುವ ಬೈಲಹೊಂಗಲ ತಾಲೂಕಿನ ವೈದ್ಯಾಧಿಕಾರಿಗಳಾದ ಡಾ ಸಂಜಯ ಸಿದ್ದಣ್ಣವರ, ಡಾ. ಬಸವಣೆಪ್ಪ ಕುಂದರನಾಡ, ಡಾ. ರೇಶ್ಮಾ ಕಾಮತೆ ಅವರನ್ನು ತಾಲೂಕಿನ ನಾಗನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿವಟಗುಂಡಿ ವೀರು ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.
ನಿವೃತ ಯೋಧರಾದ ವೀರು ದೊಡ್ಡವೀರಪ್ಪನವರ, ನಾಗರಾಜ ಗುಂಡ್ಲೂರ, ಯಲ್ಲನಗೌಡ ಸಂಗನಗೌಡ್ರ, ಶೇಕರ ಸತ್ತಿಗೇರಿ, ಬಿ. ಎಸ್. ಪಾಟೀಲ, ಶಿವಾನಂದ ಕೆಂಚನಗೌಡ್ರ, ಬಸವರಾಜ ಮಲ್ಲೂರ, ಈರಣ್ಣ ಸೋಬಲಕ್ಕನವರ, ಉಮೇಶ್ ಮಲ್ಲೂರ, ಸೋಮು ಗಿರೆಪ್ಪಗೌಡ್ರ, ಶಿವುಪುತ್ರ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಇದ್ದರು.