ಧಾರವಾಡ - ಹುಬ್ಬಳ್ಳಿ

ಡಾ. ಎಸ್‌.ಆರ್‌. ಗುಂಜಾಳ 95ನೇ ಜನ್ಮದಿನ ಅಂಗವಾಗಿ ಗೌರವ ಸಮಾರಂಭ

ಡಾ. ಎಸ್‌.ಆರ್‌. ಗುಂಜಾಳ 95ನೇ ಜನ್ಮದಿನ ಅಂಗವಾಗಿ ಗೌರವ ಸಮಾರಂಭ

ಲೋಕದರ್ಶನ ವರದಿ 

ಹುಬ್ಬಳ್ಳಿ 3 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಗಳ ಆಶ್ರಯದಲ್ಲಿ ಹಿರಿಯ ಸಾಹಿತಿ, ಗ್ರಂಥಪಾಲಕ, ವಚನ ಸಾಹಿತ್ಯ ಸಂಶೋಧಕ ಹಾಗೂ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಸ್‌.ಆರ್‌. ಗುಂಜಾಳ ಅವರ 95ನೇ ಜನ್ಮದಿನದ ಅಂಗವಾಗಿ ಅಭಿನಂದನಾ ಹಾಗೂ ಗೌರವ ಸಮಾರಂಭ ನಡೆಯಿತು.  ಈ ಸಂದರ್ಭದಲ್ಲಿ ಡಾ. ಎಸ್‌.ಆರ್‌. ಗುಂಜಾಳ ಅವರ ಜೀವನ, ಸಾಹಿತ್ಯ ಸೇವೆ ಮತ್ತು ವಚನ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು. ಅಲ್ಲದೆ, ಅವರ ಕುರಿತು ಲೇಖಕ ಹಾಗೂ ಬಸವತತ್ವ ಪ್ರಚಾರಕರಾದ ಪ್ರಕಾಶ ಗಿರಿಮಲ್ಲನವರ ಸಂಪಾದಿಸಿರುವ ಕೃತಿಯನ್ನು ಲೋಕಾರೆ​‍್ಣ ಮಾಡಲಾಯಿತು.  

ಪ್ರಕಾಶ ಗಿರಿಮಲ್ಲನವರ ಅವರನ್ನು ಶಾಲು ಹೊದಿಸಿ, ಮಾಲಾರೆ​‍್ಣ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಡಾ. ಗುಂಜಾಳ ಅವರ ಸಾಹಿತ್ಯ, ಸಮಾಜಮುಖಿ ಚಿಂತನೆ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಯನ್ನು ಕೊಂಡಾಡಿದರು.  ಕಾರ್ಯಕ್ರಮದಲ್ಲಿ ಡಾ. ಸಿ.ಆರ್‌. ಕರಿಸಿದ್ದಪ್ಪ, ಡಾ. ಎಸ್‌.ಎಲ್‌. ಸಂಗಮ, ಸಾಹಿತಿ ರಂಜಾನ್ ದರ್ಗಾ, ಡಾ. ವಿನಾಯಕ ಬಂಕಾಪುರ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಡಾ. ಸುರೇಶ್ ಡಿ. ಹೊರಕೇರಿ, ಆರ್‌. ಮೂಗಿ, ರಾಜೇಂದ್ರ ಗುಂಜಾಳ, ವೀರೇಶ್ ಜಾಲಕಟ್ಟಿ, ಚಂದ್ರಶೇಖರ ಚನ್ನಂಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ