ತಾಲೂಕಾ ಕಾರ್ಯನಿರತ ಪತ್ರಕರ್ತರಿಗೆ ಸನ್ಮಾನ ಸಮಾರಂಭ
ಬೈಲಹೊಂಗಲ: ಶ್ರೀಮಠದ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಲಿಂ.ಗಂಗಾಧರ ಶ್ರೀಗಳು ಹುಟ್ಟುಹಾಕಿದ ಸಂಸ್ಥೆಗಳನ್ನು ಕಾಪಾಡಿ, ಅವುಗಳನ್ನು ಉತ್ತುಂಗದತ್ತ ಕೊಂಡೊಯ್ಯಲು ಪ್ರಭುನೀಲಕಂಠ ಸ್ವಾಮಿಜಿ ಮುಂದಾಗಬೇಕೆಂದು ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಹಿರಿಯ ಪತ್ರಕರ್ತ ಈಶ್ವರ ಹೋಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಶ್ರೀಮಠದಲ್ಲಿ ಬೈಲಹೊಂಗಲ ತಾಲೂಕಾ ಕಾರ್ಯನಿರತ ಪತ್ರಕರ್ತರ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಲಿಂ. ಗಂಗಾಧರ ಶ್ರೀಗಳು ಈ ಭಾಗದಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿರುವ ಕಾರ್ಯ ಅಮೋಘವಾಗಿದ್ದು ಅವರ ಜೀವಿತ ಅವಧಿಯಲ್ಲಿ ಅಲ್ಪ ಸಮಯದಲ್ಲಿ ಸುಮಾರು 22 ಸಂಸ್ಥೆಗಳನ್ನು ತೆರೆಯುವ ಮೂಲಕ ಬೈಲಹೊಂಗಲವನ್ನು ವಿದ್ಯಾಕಾಶಿಯಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಸದಾ ಕ್ರೀಯಾಶೀಲರಾಗಿದ್ದರು. ಅವರ ಅಕಾಲಿಕವಾಗಿ ಲಿಂಗೈಕ್ಯರಾದ ಕೆಲವು ವರ್ಷಗಳ ನಂತರ ಶ್ರೀಮಠಕ್ಕೆ ಪ್ರಭು ನೀಲಕಂಠ ಸ್ವಾಮಿಜಿ ಅವರನ್ನು ಪಟ್ಟಾಧಿಕಾರಿಯಾಗಿ ನೇಮಕ ಮಾಡಿ, ನಂತರದ ದಿನಗಳಲ್ಲಿ ಕಾಣದ ಕೈಗಳಿಂದ ಶ್ರೀಮಠದಿಂದ ಶಿಕ್ಷಣ ಸಂಸ್ಥೆಯನ್ನು ಬೇರ್ಪಡಿಸಿ ಕೇವಲ ಶ್ರೀಗಳನ್ನು ಶ್ರೀಮಠಕ್ಕೆ ಸಿಮೀತಗೊಳಿಸಿರುವುದು ನ್ಯಾಯ ಸಮ್ಮತವೇ ಎಂದು ಖಾರವಾಗಿ ಪ್ರಶ್ನಿಸಿದರು.
ಆಡಳಿತ ಮಂಡಳಿ ಹಿಡಿತ ಇಲ್ಲದ ಕಾರಣ ಸಂಸ್ಥೆಯ ಒಂದೊಂದು ಶಿಕ್ಷಣ ಸಂಸ್ಥೆ ಪರರ ಪಾಲಾಗುತ್ತಿರುವುದು ವಿಷಾದನೀಯವಾಗಿದೆ. ಮತ್ತೆ ಅವರಿಗೆ ಶ್ರೀಮಠದೊಂದಿಗೆ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ನೀಡಲು ಆಡಳಿತ ಮಂಡಳಿ ಮುಂದಾಗಬೇಕು. ಒಂದು ವೇಳೆ ಮುಂದಾಗದಿದ್ದರೆ ಮುಂದಿನ ರೂಪರೇಷೆಗಳನ್ನು ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗವುದು ಎಂದರು.
ಶಾಖಾ ಮುರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದರು.
ಶ್ರೀಗಳು ಲಿಂಗೈಕ್ಯ ನಂತರ ಈ ನಾಡಿನ ಹಿರಿಯ, ಭಕ್ತವೃಂದ ಸಮ್ಮುಖದಲ್ಲಿ ನನ್ನನ್ನು ವಿಜೃಂಬಣೆಯಿಂದ ಪಟ್ಟಾಭಿಷೇಕ ಮಾಡಿ ಅವರ ಹಾಕಿಕೊಟ್ಟ ಶ್ರೀಮಠದ ಪರಂಪರೆಯನ್ನು ಮುಂದುವರೆಸುವಂತೆ ಸಲಹೆ ನೀಡಿದ್ದನ್ನು ಸ್ಮರಿಸಿದರು. ಮಂಬುರುವ ದಿನಗಳಲ್ಲಿ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಶ್ರೀಮಠವನ್ನು ಉತ್ತುಂಗಕ್ಕೆ ಒಯ್ಯಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ನಿರ್ದೇಶಕ ಎಸ್.ಎಸ್.ಸಿದ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಎನ್.ಎಸ್.ಚಿಲಮೂರ, ಬಿ.ಜೆ. ಹಣಬರಟ್ಟಿ, ವಿ.ಎಂ.ಬಸಿನಾಯ್ಕರ, ಎಸ್.ಆರ್.ಕಲಹಾಳ, ಎಸ್.ಎಸ್.ಬೆಳ್ಳಿಗಟ್ಟಿ, ಎಂ.ಸಿ.ಹೇಮಗಿರಿಮಠ, ಎಚ್.ಎಫ.ಅಣ್ಣಿಗೇರಿ, ಆರ್.ಬಿ.ನಾಯಕ, ಪಿ.ಎಸ್.ತಿರಕನ್ನವರ, ಎ.ಆರ್.ಸಿದ್ರಾಮನಿ, ವ್ಹಿ.ಆರ್.ಜಕಾತಿ, ಎಸ್.ಎಸ್.ಬೋರಕನವರ, ಯು.ಎ.ಮುನವಳ್ಳಿ, ಬಿ.ಸಿ.ನಾಡಗೌಡರ ಮತ್ತಿತರರು ಇದ್ದರು.
ಪೊಟೊ ಕ್ಯಾಪ್ಸನ;ಎಚ್13-ಬಿಎಲ್ಎಚ್1
ಬೈಲಹೊಂಗಲ ಶಾಖಾ ಮೂರುಸಾವಿರಮಠದಲ್ಲಿ ಶನಿವಾರ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯರನ್ನು ಪ್ರಭುನೀಲಕಂಠ ಸ್ವಾಮಿಜಿ ಸತ್ಕರಿಸಿದರು.