ಬಸವ ಪುರಾಣದಲ್ಲಿ ಭಕ್ತಿ ಹೊಳೆಯಾಗಿ ಹರಿಯಿತು: ಸಂಪಾದನಾಶ್ರೀ
ಚಿಕ್ಕೋಡಿ 23: ಚಿಂಚಣಿ ಗ್ರಾಮದಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡ ಬಸವ ಪುರಾಣದಲ್ಲಿ ಭಕ್ತಿ ಹೊಳೆಯಾಗಿ ಹರಿಯಿತು ಎಂದು ಚರಮೂರ್ತಿಮಠದ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪಟ್ಟಾಧೀಕಾರ ಮಹೋತ್ಸವ ಸಮಿತಿ ಗೌರವಾಧ್ಯಕ್ಷರು ಹಾಗೂ ಸಮಿತಿ ಸದಸ್ಯರ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಒಂದು ತಿಂಗಳ ಕಾಲ ನಡೆದ ಮಹಾಪ್ರಸಾದ ಸೇವೆ ಯಶಸ್ವಿಯಾಗಲಿಕ್ಕೆ ಚಿಂಚಣಿ ಭಕ್ತರ ಭಕ್ತಿ ಸೇವೆ ಸ್ಮರಣೀಯವಾಗಿದೆ ಎಂದರು.
ಮುದಗಲ್ ಮಹಾಂತ ಸ್ವಾಮಿಗಳು ಬಸವಾದಿ ಶಿವಶರಣರ ಆದರ್ಶ ಹಾಗೂ ಅವರ ವಚನ ಸಾಹಿತ್ಯ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಚಿಂಚಣಿ ಗ್ರಾಮಸ್ಥರು ಸ್ವಾಮೀಜಿಗಳ ಮಾತಿಗೆ ಬೆಲೆಕೊಟ್ಟು ಹೇಳಿದ ಮಾತನ್ನು ಪಾಲಿಸುವ ಇಂತಹ ಭಕ್ತರನ್ನು ಪಡೆದ ಸ್ವಾಮೀಜಿ ಧನ್ಯರು. ಯುವಕರು ನಮ್ಮ ಮಠ,ನಮ್ಮ ದಾಸೋಹ ಸೇವೆ ಎಂದು ಭಕ್ತಿಯಿಂದ ದುಡಿದು ಸೇವೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅಲ್ಲಮಪ್ರಭು ಮಹಾಸ್ವಾಮಿಗಳು ಸಂಪಾದನಾ ಮಹಾಸ್ವಾಮಿಗಳನ್ನು ಹಾಗೂ ಸಮಿತಿಯ ಸದಸ್ಯರನ್ನು ಭಕ್ತಿಯಿಂದ ಗೌರವಿಸಿದರು.
ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ,ಬಾಬಾಸಾಹೇಬ ಪಾಟೀಲ,ಸೌರಭ ಪಾಟೀಲ, ರಾಮಗೌಡ ಧರನಗುತ್ತಿ, ಅರುಣ ಕರಾ್ಯಪ್ಪಗೋಳ, ಸಂಜು ಪರೀಟ,ರಮೇಶ ಪಾಟೀಲ, ದೀಪಕ ಮುದ್ದಪ್ಪಗೋಳ,ಸುಭಾಷ ಚೌಗಲಾ,ಸಂಜಯ ಬೇರಡ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.