ರೈತರಿಗೆ ಸರ್ವಋತುಕಾಲ ನೀರು ಹರಿಯಲಿದೆ: ಡಾ. ಕೇಲಗಾರ
ಲೋಕದರ್ಶನ ವರದಿ
ರಾಣಿಬೆನ್ನೂರ 02: ಕೇಂದ್ರ ಸರ್ಕಾರ ತನ್ನ ವಾರ್ಷಿಕ ಸಂಪ್ರದಾಯದ ಬಹು ನೀರೀಕ್ಷಿತ ಬಜೆಟ್ ಮಂಡಣೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಂತ ಜಾಣ್ಮೆಯಿಂದ ಬಜೆಟ್ ಮಂಡಿಸಿ ದೇಶದ ನಾಗರೀಕರ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾಽ ಬಿ.ಎಸ್.ಕೇಲಗಾರ ಹೇಳಿದರು.
ಈ ಕುರಿತು “ಲೋಕದರ್ಶನ” ದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಡಾಽ ಕೇಲಗಾರ ಅವರು, ದೇಶದ ಜನ ಸಾಮಾನ್ಯರಿಗೆ ಮಂಡಿಸಿದ ಬಜೆಟ್‌ನಿಂದ ಮನೆ, ನೀರು, ಇಂಧನ, ಆಹಾರ ರಸ್ತೆ ಸಂಪರ್ಕ ಅಂತರ್ಜಾಲ, ಉದ್ಯೋಗ ಮತ್ತು ಶಿಕ್ಷಣ ಸೇರಿದಂತೆ ನೂರಾರು ಯೋಜನೆಗಳಲ್ಲಿ ಮೂಲಭೂತ ಸೌಕರ್ಯ ದೊರೆಯಲಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ವಿಶೇಷವಾಗಿ ನರೇಂದ್ರ ಮೋಧಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಉದ್ಯೋಗ ಕೊಡುವ ಯೋಜನೆ ಜಾರಿಗೆ ತರಲು ಕ್ರಮ ಕೈಗೊಂಡಿರುವುದು ಯುವ ಸಮುದಾಯದಲ್ಲಿ ಹರ್ಷವನ್ನು ಮೂಡಿಸಿದೆ. ವಿಶೇಷವಾಗಿ ಮಾಜಿ ಪ್ರಧಾನಿ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಬಹು ನೀರೀಕ್ಷಿತ ಕನಸಿನ ಕೂಸಾಗಿದ್ದ ನದಿಗಳ ಜೋಡಣೆ ಅತ್ಯಂತ ಮಹತ್ವದ ಕಾರ್ಯವಾಗಿದೆ. ಇದರಿಂದ ಉತ್ತರದಿಂದ ದಕ್ಷಿಣ ತುದಿಯ ವರೆಗೂ ಸರ್ವ ಋತುವಿನಲ್ಲಿಯೂ ನಿರಂತರ ನೀರು ಹರಿಯುವದರಿಂದ ರೈತಾಪಿ ಸಮುದಾಯಕ್ಕೆ ಆರ್ಥಿಕ ಚೈತನ್ಯ ದೊರೆತು ಸಮಗ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.