ರೈತರು ಸಾವಯುವ ಕೃಷಿಯತ್ತ ಮುಖ ಮಾಡಬೇಕು: ದಿಂಗಾಲೇಶ್ವರ ಶ್ರೀ
ಲೋಕದರ್ಶನ ವರದಿ
ರಾಣೇಬೆನ್ನೂರ 03: ಸಾವಯುವ ಕೃಷಿ ಜೀವಂತವಾಗಿರಬೇಕಾದರೆ ನಮ್ಮನ್ನಾಳುವ ಸರ್ಕಾರಗಳು ರಸಾಯನಿಕ ಎಲ್ಲಾ ಉತ್ಪಾದನೆಗಳನ್ನು ಬಂದುಗೊಳಿಸಬೇಕು. ಸಾವಯುವ ಕೃಷಿಯ ಬಗ್ಗೆ ಉತ್ತೇಜನ ನೀಡಬೇಕು, ಸಾವಯುವ ಕೃಷಿ ಬೀಜ ಮತ್ತು ಗೊಬ್ಬರಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಉಚಿತವಾಗಿ ವಿತರಿಸಬೇಕು. ಸಾವಯುವ ಮಾರುಕಟ್ಟೆ ತೆರೆಯಬೇಕು ಅಂದಾಗ ಮಾತ್ರ ಸಾವಯುವ ಕೃಷಿ ಬದುಕುಳಿಯಲು ಸಾಧ್ಯ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ನಡೆಯುತ್ತಿರುವ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮದ 9 ನೇ ವರ್ಷದ ಶನೈಶ್ಚರ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಏರಿ್ಡಸಿದ್ದ ಸಾವಯುವ ಮತ್ತು ಸಮಗ್ರ ಕೃಷಿ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.
ರೈತರೇ ಈ ದೇಶದ ಬೆನ್ನೆಲಬೆಂದು ಹೇಳುವ ಸರ್ಕಾರಗಳು ರೈತರಿಗೆ ಶಾಪವಾಗಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡದೆ, ಉತ್ತಮ ತಳಿ ಬೀಜಗಳನ್ನು ನೀಡದೆ ರೈತರ ಹಿತ ಕಾಪಾಡದೆ, ರೈತರಿಗೆ ವಿಶೇಷ ಯೋಜನೆಗಳನ್ನು ಸಮರ್ಕವಾಗಿ ಅನುಷ್ಠಾನಗೊಳಿಸಿದೆ ಇರುವ ಸರ್ಕಾರಗಳು ನಪಂಸಕವಾಗಿವೆ ಎಂದು ಹೇಳಿದರು.
ಈಗಿನ ಸರ್ಕಾರಗಳು ರೈತರನ್ನು ಮತ್ತು ಮನುಜರನ್ನು ದಿಕ್ಕು ತಪ್ಪಿಸುತ್ತಿವೆ, ಸರ್ಕಾರಗಳು ರೈತರ ಬಗ್ಗೆ ಹಿತಚಿಂತನೆ ಮಾಡಬೇಕು. ರೈತರ ಮತ್ತು ಕೃಷಿಯ ಬಗ್ಗೆ ವಿಶೇಷ ಯೋಜನೆಗಳನ್ನು ಸಮರ್ಕವಾಗಿ ಜಾರಿಗೊಳಿಸಿ ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ರೈತರ ಹಿತ ದೃಷ್ಠಿಯಿಂದ ಉತ್ತಮವಾದ ಕಾಯಿದೆ ಕಾನೂನುಗಳನ್ನು ತರಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಸಾವಯುವ ಸಮಗ್ರ ಕೃಷಿ ಮಿಷನ್ನಿನ ರಾಜ್ಯಾಧ್ಯಕ್ಷ ಎ.ಎಸ್.ಆನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಮಡ್ಲೂರಿನ ಮುರಘಾಮಠದ ಮುರಘರಾಜೇಂದ್ರ ಸ್ವಾಮೀಜಿ, ನಿರಂಜನ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ಹಿರೇಮಠ ಮತ್ತು ಮದ್ದರಕಿಯ ಶಿವಯೋಗಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ವಾ.ಕ.ರಾ.ರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷಕುಮಾರ ಪಾಟೀಲ, ಜಲಸಂರಕ್ಷಕ ಚನ್ನಬಸಪ್ಪ ಕೊಂಬಳಿ, ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಚನ್ನಗಿರಿಯ ಮಾಜಿ ಶಾಸಕ ಮಹಿಮಾ ಪಟೇಲ, ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ. ಬಿ, ಸ್ಪೂರ್ತಿ ಜಿ.ಎಸ್, ಮಲ್ಲಿಕಾರ್ಜುನ ಬಳ್ಳಾರಿ, ನಿಜಲಿಂಗಪ್ಪ ಬಸಗಣ್ಣಿ, ಎಚ್.ಎಫ್.ಅಕ್ಕಿ, ಡಾ. ಸುದರ್ಶನ, ಡಾ.ಮಂಜುನಾಥ, ಈರಣ್ಣ ಹಲಗೇರಿ, ಗುಡ್ಡಪ್ಪ ಮಾಳಗುಡ್ಡಪ್ಪನವರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.