ರೈತರ ಅಹೋರಾತ್ರಿ ಧರಣಿ; 31 ಗುರುವಾರ ಮತ್ತೆ ಹೆದ್ದಾರಿ ತಡೆಗೆ ನಿರ್ಧಾರ
ರಾಣೇಬೆನ್ನೂರು 29: ಓಖಿಖ ಯೋಜನೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿದವರು ರೈತರಿಗೆ ಮಾಡಿದ ವಂಚನೆಯನ್ನು ಖಂಡಿಸಿ ಮಾಕನೂರು ಶಾಖೆಯ ಮುಂದೆ ವಂಚತ ರೈತರ ನ್ಯಾಯಕ್ಕಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ‘5’ ನೇ ದಿನಕ್ಕೆ ಕಾಲಿಟ್ಟಿದ್ದು ಆರಂಭದ ದಿನ ಅಂದರೆ 24 ರಂದು ರಾಷ್ಟ್ರೀಯ ಹೆದ್ದಾರಿ ‘4’ ರ ಮಾಕನೂರು ಕ್ರಾಸ್ ಹತ್ತಿರ ರಸ್ತೆ ತಡೆ ಮಾಡಿ ಪ್ರತಿಭಟನೆ ಮೂಲಕ ಮಾಕನೂರು ಶಾಖೆಗೆ ತೆರಳಿದಾಗ ಸ್ಥಳಕ್ಕೆ ದಿಢೀರನೆ ಆಗಮಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ನಂತರದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ್ರಭು ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದವರು ತಿರಿಗಿಯೂ ಬಂದಿಲ್ಲ.
ರೈತರನ್ನು ಕಡೆಗಣಿಸುತ್ತಿರುವ ಮತ್ತು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರ ತವರು ಜಿಲ್ಲೆಯಲ್ಲಿ ಆ ರೈತರ ಶೋಷಣೆಯನ್ನು ಖಂಡಿಸಿ 31-3-2022 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಧರಣಿ ಸತ್ಯಗ್ರಾಹದಿಂದ ಪ್ರತಿಭಟನಾ ನಿರತ ರೈತರು ಮಾಕನೂರು ಕ್ರಾಸ್ ಬಳಿ ತೆರಳಿ ಮತ್ತೆ ಹೆದ್ದಾರಿ ತಡೆ ನಡೆಸಿ ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ, ಈರಣ್ಣ ಹಲಗೇರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂದು ಆಗುವ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಸರಕಾರವೆ ಹೊಣೆ ಎಂದು ಎಚ್ಚರಿಸಿದರು.