ಬಳ್ಳಾರಿ

ಎಲ್ ಎಲ್ ಸಿ ಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ರೈತರ ಒತ್ತಾಯ

ಎಲ್ ಎಲ್ ಸಿ ಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ರೈತರ ಒತ್ತಾಯ

ಬಳ್ಳಾರಿ 19: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ರೈತರ ಆಗುವಂತ ತೊಂದರೆಗಳ ಕುರಿತು ಕೂಲಂಕುಶವಾಗಿ ಚರ್ಚಿಸಿ ಕಾರ್ಯನಿವರ್ಾಹಕ ಅಧಿಕಾರಿಗಳು ನಂಬರ 6 ಕಾಲುವೆ ವಿಭಾಗ ಕೋಟೆ ಇವರಿಗೆ ಮನವಿ ಪತ್ರ ಸಲ್ಲಿಸಿದರು. 

ಅಧಿಕಾರಿಗಳ ಹತ್ತಿರ ಕೃಷ್ಣಮೂರ್ತಿಯವರು ಮಾತನಾಡುತ್ತಾ ಚಾಗನೂರು ಸಂಗನಕಲ್ಲು ಡಿಪಿ ನಂಬರ್ 27 ಕಾಲುವೆ ಬೇಲಿ ಮತ್ತು ಕಾಮಗಾರಿ ಪೂರ್ಣಗೊಳಿಸುವಂತೆ ನಂತರ  ಕಾಲುವೆಯಲ್ಲಿ ಇರುವಂತಹ ಕಸ ಕಡ್ಡಿ ಸ್ವಚ್ಛಗೊಳಿಸಿ ಸ್ವಚ್ಛಗೊಳಿಸಬೇಕು. ಇದರಿಂದ ರೈತರಿಗೆ ನೀರು ಹೋಗದೆ ತುಂಬಾ ಕಷ್ಟಕರವಾಗುತ್ತದೆ . ಪ್ರತಿವರ್ಷದಂತೆ ಈ ವರ್ಷವೂ ಸ್ವಚ್ಛಗೊಳಿಸುತ್ತಿದ್ದು ಆದರೆ ಈ ವರ್ಷ ಸ್ವಚ್ಛಗೊಳಿಸಿದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಹಾಗೆ ಉಳಿಸುತ್ತಾರೆ, ತಾವು ಹಮ್ಮಿಕೊಂಡಿರುವ ಕಾಮಗಾರಿಯು ತ್ವುರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. 

ಆದುದರಿಂದ ತಾವುಗಳು ಆದಷ್ಟು ಬೇಗನೆ ಇದರ ಬಗ್ಗೆ ಅತಿ ಜರುರಾಗಿ ಪರಿಶೀಲಿಸಿ ಆದಷ್ಟು ಬೇಗನೆ  ಸ್ವಚ್ಛಗೊಳಿಸಬೇಕೆಂದು ಈ ಮೂಲಕ ತಮ್ಮ  ಗಮನಕ್ಕೆ ತಂದಿದ್ದೇವೆ. ಒಂದು ವೇಳೆ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದರೆ ತಾವುಗಳು  ನಿರ್ಲಕ್ಷ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಇದರ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಮಾತನಾಡಿ, ವಿವರವಾಗಿ ಮಾಹಿತಿ ನೀಡಿದರು. 

 ಕೃಷ್ಣಮೂರ್ತಿ ,ಶೇಖರಪ್ಪ ,ಹೇಮಂತ್ ರಾಜ್ ಗಾಳೆಪ್ಪ, ಯು .ಸಂಗಪ್ಪ, ಹುಲಗಪ್ಪ, ಹನುಮನ ಗೌಡ, ದೊಡ್ಡಬಸಪ್ಪ ,ಜೆ ಶಂಕ್ರಪ್ಪ ,ಎಸ್ ಕೆ ಗಾದಿಲಿಂಗಪ್ಪ ಹಾಗೂ ರೈತ ಮುಖಂಡರು ಇತರರು ಭಾಗವಹಿಸಿದ್ದರು 

ಸುದ್ದಿ ಓದಿ