ಬೆಳೆವಿಮೆ ಪಾವತಿ ಆಗದೇವಿರುವ ಖಂಡಿಸಿ ರೈತರು ತಡಸ ರಸ್ತೆ ತಡೆದು ಪ್ರತಿಭಟನೆ
ಶಿಗ್ಗಾವಿ,22 : 2022 23ನೇ ಸಾಲಿನ ತಾಲೂಕಿನ ಹೊಸೂರು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳೆವಿಮೆ ಪಾವತಿ ಆಗದಿಲ್ಲದಿರುವುದನ್ನು ಖಂಡಿಸಿ ಮಂಗಳವಾರ ರೈತರು ತಡಸ ಹಾನಗಲ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಿಲಯನ್ಸ್ ಕಂಪನಿಯು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು, ಯತ್ತಿನಹಳ್ಳಿ, ಅ ಮ ಮಸಲಿಕೊಪ್ಪ, ಅಮ ಹಿರೇಕೊಪ್ಪ, ಅರಟಾಳ, ಬಸವನಕೊಪ್ಪ, ಜೊಂಡಲಕಟ್ಟಿ, ಮತ್ತು ಮಾಕಾಪೂರ ಗ್ರಾಮದ ಯಾವೊಬ್ಬ ರೈತರಿಗೂ ಬೆಳೆ ವಿಮೆ ಪಾವತಿ ಮಾಡಿಲ್ಲ ಗೋವಿನ ಜೋಳ ಹಾಗೂ ಬತ್ತದ ಬೆಳೆ ವಿಮೆಯಾಗಿದ್ದು ಸಾವಿರಾರು ರೈತರ ಬೆಳೆವಿನ ಕಟ್ಟಿದರು ಅವರ ಖಾತೆಗೆ ಬೆಳೆಯುವ ಜಾಗ ಇಲ್ಲ ಎಂದು ಹಾಗೂ ಕಳೆದ ವರ್ಷ ಬಿತ್ತಿದ ಬೀಜ ಹಾಕಿದ ಗೊಬ್ಬರ ಎಲ್ಲವೂ ಹಾಳಾಗಿದ್ದು ಅತಿ ಹೆಚ್ಚು ಹಾನಿಯನ್ನು ಅನುಭವಿಸಿದ್ದಾರೆ ಕೂಡಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಶಿವಾನಂದ ಮ್ಯಾಗೇರಿ ಕಳೆದ ವರ್ಷ ಮಳೆಬಾರದೇ ಬೆಳೆ ಹಾಳಾಯಿತು ಈ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ ಸರ್ಕಾರ ರೈತರ ಪರ ನಿಲುವುಗಳನ್ನು ತಾಳಬೇಕಾಗಿದೆ ಸಮಗ್ರ ಅಧ್ಯಯನ ಮಾಡಿ ಹೊಸೂರ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೂ ರೈತರ ಬೆಳೆ ವಿಮೆಯನ್ನು ಪಾವತಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ನಂತರ ಮಾತನಾಡಿದ ರೈತ ತಿಪ್ಪಣ್ಣ ಸಾತಣ್ಣವರ ಸರ್ಕಾರವು ಕಂಪನಿಯ ಜೊತೆಗೆ ರೈತರಿಗೆ ಮೋಸ ಆಗದಂತೆ ನಿಯಮಗಳನ್ನು ಜಾರಿ ಮಾಡಬೇಕು ರೈತರು ಮಾಡಿಸಿದಂತ ಬೆಳವಿಮೆಯನ್ನು ಸಮರ್ಕ ಸಮಯದಲ್ಲಿ ಅವರ ಖಾತೆಗೆ ಜಮಾ ಮಾಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂತೋಷ ಹಿರೇಮಠ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಬೆಳೆ ವಿಮೆ ಪಾವತಿ ಆಗದಿರದ ಕುರಿತು ಈಗಾಗಲೇ ಕಂಪನಿ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಇನ್ನೂ 15 ದಿನಗಳಲ್ಲಿ ಬೆಳೆ ವಿಮೆ ಜೆಮೆ ಮಾಡುವಂತೆ ಕಂಪನಿ ಜೊತೆ ಮಾತನಾಡುತ್ತೇವೆ ಎಂದರು. ಬಳಿಕ ರೈತರು ರಸ್ತೆ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಲೆ, ತಾಲೂಕ ರೈತ ಸಂಘದ ಅಧ್ಯಕ್ಷ ಈರಣ್ಣ ಸಮಗೊಂಡ, ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ಈರ್ಪ ಸುಣಗಾರ, ವೀರೇಶ ಪಾಟೀಲ್, ಕೆಸಿಸಿ ಬ್ಯಾಂಕ್ ಸಂಗಮೇಶ ಕಂಬಾಳಿಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಲಮಾಣಿ, ಜಿವಾಜಿ ಕುಲ್ಕರ್ಣಿ, ಮಹಾವೀರ ಧಾರವಾಡ, ಹರ್ಜಪ್ಪ ಲಮಾಣಿ, ನಾಗರಾಜ ಸೋರಗೊಂಡ, ಗದೆಗೆಪ್ಪ ಹೊನ್ನಿಹಳ್ಳಿ, ಬಾಹುಬಲಿ ಸೋಗಲಿ, ಈರ್ಪ ಡವಗಿ, ಹಾದಪ್ಪ ಛಬ್ಬಿ, ಶೇಕಪ್ಪ ಸೋರಗೊಂಡ ಹಲವಾರು ರೈತರು ಸಂಘಟನೆಯ ಸದಸ್ಯರು ಇದ್ದರು.