ರೈತರಿಂದ ಧರಣಿ ಸತ್ಯಾಗ್ರಹದ ಮೂಲಕ ವಿವಿಧ ಬೇಡಿಕೆಗಳನ್ನೆಡಿರಸಲು ಒತ್ತಾಯ
ವಿಜಯನಗರ 25: ರಾಜ್ಯಾದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರು ತತ್ತರಿಸಿದ್ದಾರೆ. ಆದ್ದರಿಂದ ರಾಜ್ಯಾದ್ಯಂತ ಬರಗಾಲವೆಂದು ಕೂಡಲೇ ಸರ್ಕಾರ ಘೋಷಿಸಬೇಕು. ರೈತರಿಗೆ ಬೆಳೆ ಪರಿಹಾರಾರ್ಥವಾಗಿ ಎಕರೆಗೆ 25,000/-ರೂಪಾಯಿಗಳನ್ನು ಘೋಷಿಸಿ, ಜನ-ಜಾನುವಾರುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನೀರಾವರಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ತಡೆರಹಿತ ಗುಣಮಟ್ಟದ 7ಗಂಟೆ ವಿದ್ಯುತ್ನ್ನು ಪೂರೈಸಬೇಕು. ಅಕ್ರಮ-ಸಕ್ರಮ ಅಡಿಯಲ್ಲಿ ಹಣ ಕಟ್ಟಿರುವ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಸಬೇಕು. ಮತ್ತು ಸುಟ್ಟುಹೋದ ಖಿ.ಅಗಳನ್ನು ಬದಲಿಸಿ ತಕ್ಷಣವೇ ಹೊಸ ಖಿ.ಅಗಳನ್ನು ಹಾಕಿಸಿಕೊಡಬೇಕು. ರೈತರ ಬ್ಯಾಂಕ್, ಸಹಕಾರಿ ಸಂಸ್ಥೆ, ಕೃಷಿ ಭೂ ಅಭಿವೃದ್ದಿ ಬ್ಯಾಂಕ್, ಖಾಸಗಿ ಫೈನಾನ್ಸ್ಗಳ ಎಲ್ಲಾ ಸಾಲ ವಸೂಲಾತಿಯನ್ನು ತಡೆಹಿಡಿಯಬೇಕು ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಏಇಖಅ ಇಲಾಖೆ ಪಂಪ್ಸೆಟ್ಗಳ ಖಖ ನಂಬರ್ಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಿರುವುದನ್ನು ಹಿಂಪಡೆಯಬೇಕು. ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವುದನ್ನು ತತಕ್ಷಣ ನಿಲ್ಲಿಸಬೇಕು ಮತ್ತು ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅನುಭವದಲ್ಲಿರುವ ರೈತರಿಗೆ ಸಾಗುವಾಳಿ ಪತ್ರ ಕೊಡಬೇಕು. ಬೆಳೆ ವಿಮೆ ಪಡೆದುಕೊಂಡ ಕಂಪನಿಗಳು ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಕೊಬ್ಬರಿ ಬೆಲೆ ಸ್ಥಿರತೆ ಕಾಪಾಡಬೇಕು. ಬಗರ್ಹುಕ್ಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡಬೇಕು ಮತ್ತು ಬರಗಾಲ ಪರಿಹಾರವನ್ನು ನೀಡಬೇಕು. ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಸರಿಸಮಾನಾದ ಪರಿಹಾರ ಮತ್ತು ಮೃತಪಟ್ಟವರಿಗೆ 10ಲಕ್ಷ ರೂ. ಪರಿಹಾರವನ್ನು ನೀಡಬೇಕು. ಸಾವಯವ ರೈತರಿಗೆ ಸೌಲಭ್ಯಗಳನ್ನು ಪೂರೈಸಿ ಉತ್ತೇಜನ ಕೊಡಬೇಕು. ಹೊಸಪೇಟಯೆಲ್ಲಿ ಜಿಲ್ಲಾಸ್ಪತ್ರೆ ಇಲ್ಲದ್ದರಿಂದ ನೂರು ಹಾಸಿಗೆ ಆಸ್ಪತ್ರೆ ಮೇಲೆಯೇ ಭಾರ ಬೀಳುತ್ತಿದೆ. ಚಿಕಿತ್ಸೆಗಾಗಿ ಜಿಲ್ಲ ಜನರು ಬೇರೆ ಜಿಲ್ಲೆಯನ್ನು ಆಶ್ರಯಿಸಿದ್ದಾರೆ. ಇಗ ಜಿಲ್ಲಾಸ್ಪತ್ರೆ ಕಟ್ಟಡ ಕೂಡ ರೂ.104 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಟ್ಟಡ ಪೂರ್ಣಗೊಳಿಸಿ, ಶೀಘ್ರ ಆರಂಭಿಸಬೇಕು. ಜಿಲ್ಲೆಯ ತಾಲೂಕು, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ನೀಗಿಸಬೇಕಿದೆ. ರೈತರಿಗೆ ಬ್ಯಾಂಕ್ಗಳ ಕಾಟ ಬರಗಾಲದಿಂದ ತತ್ತರಿಸಿರುವ ಅನ್ನದಾತರಿಗೆ ಸರ್ಕಾರ ಕೂಡಲೇ ಅಭಯ ನೀಡಬೇಕಿದೆ. ಬ್ಯಾಂಕ್ಗಳು ಬೆಳೆ ಸಾಲ ವಸೂಲಾತಿಗೆ ನಿಂತಿವೆ. ಈ ಬಾರಿ ಬೆಳೆಯೇ ಬೆಳೆದಿಲ್ಲ, ಹಾಗಾಗಿ ಸಾಲದ ಬಡ್ಡಿ ಮನ್ನಾ ಮಾಡಿ, ರೈತರ ನೆರವಿಗೆ ಸರ್ಕಾರ ಧಾವಿಸಲಿ, ಅನ್ನದಾತರಿಗೆ ಬ್ಯಾಂಕುಗಳು ಕಿರುಕುಳ ನೀಡಿದರೆ ಜಿಲ್ಲಾಡಳಿತದ ರಕ್ಷಣೆ ದೊರೆಯಬೇಕಿದೆ. ನಗರದ ಚಿತ್ತವಾಡ್ಗಿಯ ಐ.ಎಸ್.ಆರ್. ಸಕ್ಕರೆ ಕಾರ್ಖಾನೆ ಮುಚ್ಚಿದ ಬಳಿಕ ಈ ಭಾಗದ ಕಬ್ಬು ಬೆಳೆಯುವ ರೈತರು ಹೊಸ ಕಾರ್ಖಾನೆಗೆ ಬೇಡಿಕೆ ಸಲ್ಲಿಸಿದ್ದರು. ಹಿಂದಿನ ಸರ್ಕಾರ ಹಂಪು ಶುಗರ್ಸ್ ಎಂಬ ಕಾರ್ಖಾನೆ ಸ್ಥಾಪನೆಗೆ ಹಸಿರು ನಿಶಾನೆ ನೀಡಿದ್ದಾರೆ. ಈಗ ಜಾಗದ ವಿವಾದದಿಂದ ಈ ಕಾರ್ಖಾನೆ ಸ್ಥಾಪನೆಯೂ ವಿಳಂಬವಾಗಿದ್ದು, ಸಕ್ಕರೆ ಕಾರ್ಖಾನೆ ಬೇಗ ಸ್ಥಾಪನೆಯಾಗಲಿ ಎಂಬುದು ರೈತರ ಬೇಡಿಕೆಯಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷರು ಎಂ.ದಾನೇಶ್, ತಾಲೂಕು ಅಧ್ಯಕ್ಷರಾದ ಕೆ.ಮಲ್ಲಿಕಾರ್ಜುನ, ರೈತ ಮುಖಂಡರು : ಶಂಕರಗೌಡ, ಮರಿಸ್ವಾಮಿ, ಹೆಚ್.ಹುಲುಗಪ್ಪ, ಇಂಗಳಿಗಿ ದ್ಯಾಮಣ್ಣ, ಮಲ್ಲೇಶ್, ಸಿದ್ದು, ಸುರೇಶ್, ಜಗದೀಶ್, ಖಾಜಸಾಬ್, ಇನ್ನು ಮುಂತಾದವರು ಉಪಸ್ಥಿತರಿದ್ದರು.