ಹುಲ್ಯಾಳ ಗ್ರಾಪಂದಲ್ಲಿ ರೈತರ ಸಭೆ
ಲೋಕದರ್ಶನ ವರದಿ,
ಜಮಖಂಡಿ 12: ಬಾಗಲಕೋಟೆ-ಕುಡಚಿ ರೈಲ್ವೇ ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನಗೊಂಡ ಜಮೀನುಗಳ ಭೂಮಾಲೀಕರಿಗೆ ಭೂ ಪರಿಹಾರ ಸಂದಾಯ ಮಾಡುವ ಸಭೆಯನ್ನು ಜಮಖಂಡಿ ತಾಲೂಕಿನ ಹುಲ್ಯಾಳದ ಗ್ರಾಮ ಪಂಚಾಯತ ಸಭಾಭವನದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸಭೆ ನಡೆಸಿದರು.
ಬಾಗಲಕೋಟೆ-ಕುಡಚಿ ರೈಲ್ವೇ ಮಾರ್ಗ ನಿಮರ್ಾಣಕ್ಕಾಗಿ ತ್ವರಿತ ಗತಿಯಲ್ಲಿ ಭೂಸ್ವಾಧೀನ ಕಾರ್ಯ ಮುಗಿಸಲಿದ್ದು, ಜಮೀನುಗಳ ಭೂಮಾಲೀಕರಿಗೆ ಭೂ ಪರಿಹಾರ ಸಂದಾಯ ಮಾಡಲು ರೈತರ ಮನೆಗೆ ಸರ್ಕಾರವೇ ಆಗಮಿಸಲಿದೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
ಜಮಖಂಡಿ ಉಪವಿಭಾಗದ ಜಮಖಂಡಿ, ಮುಧೋಳ ತಾಲೂಕಿನಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಪರಿಹಾರದ ಚೆಕ್ ನೀಡಲು ಕಾರ್ಯ ಪ್ರವೃತ್ತರಾಗಿದ್ದು, ಜಮಖಂಡಿ, ಮುಧೋಳ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ಈಗಾಗಲೇ ಸರ್ವೇ ಕಾರ್ಯ ಸಂಪೂರ್ಣಗೊಂಡಿದ್ದು, ಭೂ ಮಾಲೀಕರಿಗೆ ಹರಿಹಾರದ ಹಣ ಬಿಡುಗಡೆಗೊಂಡಿದೆ. ಸರ್ಕಾರದ ಆದೇಶದಂತೆ ಮಧ್ಯ ವರ್ತಿಗಳ ಹಾವಳಿ ತಡೆಗಟ್ಟಲು ಖುದ್ದಾಗಿ ಉಪವಿಭಾಗಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ ವರ್ಗ ಭೂಸ್ವಾಧೀನದ ಪರಿಹಾರ ಚೆಕ್ ನೀಡಲು ಮುಂದಾಗಿದ್ದಾರೆ.
ಫೆ.13,ಜಾಲಿಬೇರಿ ಫೆ.15,ತೇರದಾಳ ಫೆ.17 ನಾವಲಗಿ ಫೆ.20 ಈ ದಿನಾಂಕಗಳಂದು ಈ ಗ್ರಾಮಗಳಿಗೆ ಸಂಬಂಧಿಸಿದಂತೆ ಭೂ ಪರಿಹಾರವನ್ನು ಭೂಮಾಲಿಕರಿಗೆ ಅವರ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಭೂ ಚೆಕ್ಸಂದಾಯ ಮಾಡಲಾಗುವುದು.ರೈತರಿಂದ ಅವಶ್ಯ ಇರುವ ದಾಖಲೆಗಳನ್ನು ಪಡೆದು ಪರಿಶೀಲಿಸಿ ಸ್ಥಳದಲ್ಲಿಯೇ ಪರಿಹಾರ ಸಂದಾಯ ಕ್ರಮ ಕೈಗೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದು ಅವರು ತಿಳಿಸಿದರು.
ಉಪ ತಹಸೀಲ್ದಾರ ನಾಗರಾಜ ಬಿರಡಿ, ಕಂದಾಯ ನಿರೀಕ್ಷಕ ಬಸವರಾಜ ಜಿಗಳೂರ,ಗ್ರಾಮಲೆಕ್ಕಾಧಿಕಾರಿ ಗಿರೀಶ ತಬಾಡಗಿ, ಪಿಡಿಓ ಸುರೇಶ ಕಡಪಟ್ಟಿ, ಗ್ರಾಪಂ ಅಧ್ಯಕ್ಷೆ ಹಣಮವ್ವ ಹಲಗಲಿ, ಉಪಾಧ್ಯಕ್ಷ ಶ್ರೀಶೈಲ್ ಸುಣಗದ ಇದ್ದರು.