ಕಂಪ್ಲಿ

ನಿರಂತರ ಭತ್ತ, ಜೋಳ ಖರೀದಿ ಕೇಂದ್ರ ಸ್ಥಾಪಿಸುವಂತೆ ರೈತರ ಹಕ್ಕೋತ್ತಾಯ

ನಿರಂತರ ಭತ್ತ, ಜೋಳ ಖರೀದಿ ಕೇಂದ್ರ ಸ್ಥಾಪಿಸುವಂತೆ ರೈತರ ಹಕ್ಕೋತ್ತಾಯ


ನಿರಂತರ ಭತ್ತ, ಜೋಳ ಖರೀದಿ ಕೇಂದ್ರ ಸ್ಥಾಪಿಸುವಂತೆ ರೈತರ ಹಕ್ಕೋತ್ತಾಯ  

ಕಂಪ್ಲಿ 23: ಭತ್ತ, ಜೋಳ ಖರೀದಿ ಕೇಂದ್ರ ತೆರೆಯುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಇಲ್ಲಿನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಎಸ್‌.ಶಿವರಾಜಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಇತ್ತೀಚೆಗಿನ ಮಳೆದಿಂದಾಗಿ ಭತ್ತದ ಬೆಳೆಗಳು ಹಾನಿಗೊಳಗಾಗುತ್ತಿದೆ. 

 ಇದರಿಂದ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕುವ ಜತೆಗೆ ಸಾಲದ ಸುಳಿಯಲ್ಲಿ ಬೆಯ್ಯುವಂತಾಗಿದೆ. ಭತ್ತ, ಜೋಳ ಕೊಯ್ಲು ಆಗುತ್ತಿದ್ದು ಕೂಡಲೇ ಭತ್ತ, ಜೋಳ ಖರೀದಿ ಕೇಂದ್ರ ತೆರೆಯಬೇಕು. ನಿರಂತರವಾಗಿ, ಷರತ್ತುರಹಿತವಾಗಿ ಭತ್ತ, ಜೋಳ ಖರೀದಿ ಕೇಂದ್ರ ನಡೆಸಬೇಕು. ಭತ್ತ, ಜೋಳ ಖರೀದಿಸಿದ ಕೂಡಲೇ ರೈತರ ಖಾತೆಗೆ ಹಣ ಜಮೆ ಮಾಡಬೇಕು.  

ಅನ್ನಭಾಗ್ಯ ಯೋಜನೆಗೆ ಬೇರೆ ರಾಜ್ಯದಿಂದ ಅಕ್ಕಿ ಅಮದು ನಿಲ್ಲಿಸಿ, ರಾಜ್ಯದ ರೈತರು ಬೆಳೆದ ಭತ್ತವನ್ನಾಗಲಿ, ಅಕ್ಕಿಯನ್ನಾಗಲಿ ಖರೀದಿಸಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವಲ್ಲಿ ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ರೈತ ಸಂಘದ ಪದಾಧಿಕಾರಿಗಳಾದ ಆನಂದರೆಡ್ಡಿ, ಎಮ್ಮಿಗನೂರು ವೀರೇಶ, ಕೊಟ್ಟೂರು ರಮೇಶ, ಆದೋನಿ ರಂಗಪ್ಪ, ಕಾಗೆ ಈರಣ್ಣ, ವಿ.ಟಿ.ನಾಗರಾಜ, ಎನ್‌.ತಿಮ್ಮಪ್ಪ, ಕೆ.ಮಂಜುನಾಥ, ಮಲ್ಲಿಕಾರ್ಜುನ, ಬೆಳಗೋಡು ದೊಡ್ಡಬಸವರಾಜ, ಎಂ.ಸುರೇಶ ಸೇರಿ ಇತರರಿದ್ದರು.  ಅ.001: ಕಂಪ್ಲಿಯಲ್ಲಿ ರೈತ ಸಂಘದವರು ತಹಸೀಲ್ದಾರ್ ಎಸ್‌.ಶಿವರಾಜಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ