ಚಿಕ್ಕೋಡಿ

ರೈತ ಸಂಘಟನೆಗಳು ಸುಗಮ ಅಧಿವೇಶನ ನಡೆಯಲು ಸಹಕರಿಸಲಿ: ಬೆಂಡವಾಡೆ

ರೈತ ಸಂಘಟನೆಗಳು ಸುಗಮ ಅಧಿವೇಶನ ನಡೆಯಲು ಸಹಕರಿಸಲಿ: ಬೆಂಡವಾಡೆ

ಚಿಕ್ಕೋಡಿ 12: ರೈತರ ಪ್ರತಿಯೊಂದು ಸಮಸ್ಯೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿದೆ. ಆದರೆ ಬೆಳಗಾವಿ ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕಾಲ ನಡೆಯುವ ಅಧೀವೇಶನ ಸಂದರ್ಭದಲ್ಲಿ ರೈತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಅನಾವಶ್ಯಕವಾಗಿ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ, ಸುಗಮ ಅಧಿವೇಶನ ನಡೆಯಲು ಸಹಕರಿಸಬೇಕು ಎಂದು ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಹೇಳಿದರು. 

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷ ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಅಧೀವೇಶನ ನಡೆಸುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಅಧೀವೇಶನ ಇದು ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಆಗಬೇಕು. ಆದರೆ ಅಧೀವೇಶನ ಗದ್ದಲ, ಪ್ರತಿಭಟನೆ, ಧರಣಿ ಹೀಗೆ ಹತ್ತು ಹಲವು ಕಾರಣಗಳಿಂದ ಗಲಾಟೆಯಲ್ಲಿಯೇ ಅಧೀವೇಶನ ಮುಗಿದು ಹೋಗುತ್ತಿದೆ. ಇದರಿಂದ ಈ ಭಾಗದ ಸಮಸ್ಯೆಗಳ ಕುರಿತು ಸಮರ​‍್ಕ ಚರ್ಚೆ ನಡೆಯಲು ಆಸ್ಪಧ ಸಿಗುದಿಲ್ಲ, ಹೀಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದರು.  

ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಕಿಸಾನ ಸಮ್ಮಾನ ಯೋಜನೆಯಡಿ ಪ್ರತಿ ವರ್ಷಕ್ಕೆ 6 ಸಾವಿರ ರೂ ಸಹಾಯಧನ ನೀಡುತ್ತದೆ. ಇದರ ಜೊತೆಗೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ 4 ಸಾವಿರ ರೂ ರೈತರಿಗೆ ಕೊಡುತ್ತದೆ. ರಾಜ್ಯದ ಸುಮಾರು 50.36 ಲಕ್ಷ ಕ್ಕೂ ಹೆಚ್ಚಿನ ರೈತರು ಇದರ ಪ್ರಯೋಜನೆ ಪಡೆದುಕೊಂಡಿದ್ದಾರೆ. ಪ್ರಧಾನಂತ್ರಿ ಫಸಲ್ ಭೀಮಾ ಯೋಜನೆಯಡಿ ರಾಜ್ಯದ 5 ಲಕ್ಷ ಕ್ಕೂ ಹೆಚ್ಚು ರೈತರಿಗೆ ಪ್ರಯೋಜನೆವಾಗಿದೆ. ಕೇಂದ್ರ ಸರ್ಕಾರ ದೇಶಾಧ್ಯಂತ 10 ಸಾವಿರ ರೈತ ಉತ್ಪಾದನಾ ಸಂಸ್ಥೆಗಳನ್ನು(ಎಫ್‌ಪಿಒ) ಸ್ಥಾಪಿಸಿದೆ. ನೀರಾವರಿಯ ಕೃಷಿ ಸಂಚಾಯಿ ಯೋಜನೆ, ಕೃಷಿ ವಿಕಾಸ ಯೋಜನೆ, 14 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ ನೀಡುವ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ರೈತರಿಗೆ ನೀಡಿದೆ ಎಂದರು. 

ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಸದ್ಯ ಸಕ್ಕರೆ ಕಾರ್ಖಾನೆ ಆರಂಭವಾಗಿದ್ದು, ಪ್ರತಿ ರೈತರಿಗೆ ಯೋಗ್ಯ ದರ ನೀಡಲು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಎಫ್‌.ಆರ್‌.ಪಿ ದರಗಿಂತ ಹೆಚ್ಚುವರಿ ದರ ನೀಡಲು ಸರ್ಕಾರ ಸೂಕ್ತ ಕ್ರಮಕೈಗೊಂಡಿದೆ. ಹೀಗಾಗಿ ಅಧೀವೇಶನ ವೇಳೆಯಲ್ಲಿ ಅನಾವಶ್ಯಕ ಪ್ರತಿಭಟನೆ ನಡೆಸಿ ಅಧೀವೇಶನದ ಸಮಯ ಹಾಳು ಮಾಡಬಾರದು ಎಂದು ಒತ್ತಾಯಿಸಿದರು. 

ಕರ್ನಾಟಕ ರಾಜ್ಯ ಕಬ್ಬು ನಿಯಂತ್ರಣ ಮಂಡಳಿ ನಿರ್ದೇಶಕ ಅಪ್ಪಾಸಾಹೇಬ ಚೌಗಲೆ ಮಾತನಾಡಿ, ಉತ್ತರ ಕರ್ನಾಟಕ ಕುರಿತು ಸಮಗ್ರ ಚರ್ಚೆ ಮಾಡಲು ಇದೊಂದು ಸೂಕ್ತ ಅವಕಾಶ ಇರುತ್ತದೆ. ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುವುದರಿಂದ ಸರ್ಕಾರ ಪ್ರಮುಖ ವಿಷಯಗಳ ಕುರಿತು ಚರ್ಚೆ ಮಾಡಲು ಸಾಧ್ಯವಾಗುದಿಲ್ಲ, ರೈತರು ನೀರೀಕ್ಷೆ ಮಾಡಿದಕ್ಕಿಂತಲೂ ಹೆಚ್ಚಿನ ಯೋಜನೆಳು ಬಿಜೆಪಿ ಸರ್ಕಾರ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತ್ತೇಪ್ಪ ನಾಯಿಕ, ರಾಜು ಹರಗನ್ನವರ ಇದ್ದರು. 


ಸುದ್ದಿ ಓದಿ