ಬಳ್ಳಾರಿ

ಎಪಿಎಂಸಿಯಲ್ಲಿ ರೈತರ ಬೆಳೆ ಒಣ ಹಾಕುವ ಕಟ್ಟೆ ದುರಸ್ತಿಗೆ ಎಎಪಿ ಮನವಿ

ಎಪಿಎಂಸಿಯಲ್ಲಿ ರೈತರ ಬೆಳೆ ಒಣ ಹಾಕುವ ಕಟ್ಟೆ   ದುರಸ್ತಿಗೆ ಎಎಪಿ ಮನವಿ

ಬಳ್ಳಾರಿ 16: ನಗರದ ಎಪಿಎಂಸಿ ಮುಖ್ಯದ್ವಾರದ (ಹಳೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ನೇರದಾರಿ) ಮೊದಲನೇ ರಸ್ತೆಯ ಎಡಕ್ಕೆ ನಾಗರಾಜ್ ಹೊಟೆಲ್ ಎದುರುಗಡೆಯ ರಸ್ತೆಯ ರೇಣುಕಾ ಯಲ್ಲಮ್ಮ ಗುಡಿ ಹತ್ತಿರ ಇರುವ ರೈತರ ಬೆಳೆಯನ್ನು ಒಣಗಿ ಹಾಕುವ ಕಟ್ಟೆಯು ಸುಮಾರು ವರ್ಷಗಳ ಹಿಂದೆ ಒಡೆದು ಹೋಗಿ ರೈತರ ಬಳಕೆಗೆ ಯೋಗ್ಯವಾಗಿರುವುದಿಲ್ಲ ಇದರಿಂದ ಮಾರುಕಟ್ಟೆಗೆ ರೈತರು ತಂದ ಮಾಲನ್ನು ಒಣಗಿಸಲು ಕಷ್ಟವಾಗಿರುತ್ತದೆ ಕಾರಣ ಈ ಕಟ್ಟೆಯನ್ನು ದುರಸ್ಥಿ ಮಾಡಿ ರೈತರಿಗೆ ಅನುಕೂಲವಾಗುವಂತೆ ನಿರ್ಮಿಸಿ ಕೊಡಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿ ಮಲ್ಲಪ್ಪ ಮತ್ತಿತರರು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಶ್ರೀಧರಗಡ್ಡೆ ಬಸಲಿಂಗಪ್ಪ ಇವರಿಗೆ ಮನವಿ ಪತ್ರವನ್ನು ನೀಡಿ ವಿನಂತಿಸಿದರು.  

ಈ ಹಿಂದೆ ಸಹ ಇದೇ ರೀತಿಯಲ್ಲಿ ನಮ್ಮ ಮನವಿಗೆ ಸ್ಪಂದಿಸಿ ನಗರದ ತರಕಾರಿ ಮಾರುಕಟ್ಟೆಯ ದಲ್ಲಾಳಿಗಳು ಪ್ರತಿ ಸೋಮವಾರದಂದು ರಜೆ ಮಾಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿ ಸೋಮವಾರದ ದಲ್ಲಾಳಿಗಳ ಸ್ವಯಂಘೋಷಿತ ರಜೆಯನ್ನು ರದ್ದುಪಡಿಸಿ ನಿರಂತರವಾಗಿ ವಾರಪೂರ್ತಿ ತರಕಾರಿ ಮಾರುಕಟ್ಟೆ ನಡೆಯುವಂತೆ ಆದೇಶ ಮಾಡಿದ್ದರಿಂದ ಇದೇ ಸಮಯದಲ್ಲಿ ಅವರನ್ನು ಶಾಲು ಹಾಕಿ ಸನ್ಮಾನಿಸಲಾಯಿತು.  

ಪಕ್ಷದ ಜಿಲ್ಲಾ ಕಾರ್ಯದರ್ಶಿ ಖಲಂದರ್, ಗ್ರಾಮೀಣಾಧ್ಯಕ್ಷ ಕಿರಣ್‌ಕುಮಾರ್, ಮುಖಂಡರಾದ ಜೆ.ವಿ ಮಂಜುನಾಥ್, ಯುವ ಮುಖಂಡರಾದ ಅಮೀತ್, ಪವನ್  ಮತ್ತು ಹಸಿರು ಸೇನೆಯ ಮುಖಂಡರಾದ ಈಶ್ವರ​‍್ಪ, ರುದ್ರ​‍್ಪ, ಸಿದ್ದರಾಮ ಸೇರಿದಂತೆ ಮತ್ತಿತರಿದ್ದರು. 


ಸುದ್ದಿ ಓದಿ