ರೈತ ಸಂಘದ ಮಹಿಳಾ ಸಮಾವೇಶ
ಬೈಲಹೊಂಗಲ 28: ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರೈತ ಸಂಘದ ಮಹಿಳಾ ಸಮಾವೇಶ ಶನಿವಾರ ಸಂಜೆ ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಜರುಗಿತು.
ತಾಲೂಕಾ ಮಹಿಳಾ ರೈತ ಸಂಘದ ಅಧ್ಯಕ್ಷ ಸುರೇಖಾ ಕಾಬೋಜಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ನೀತಿ ಕಾನೂನು ವಿರೋಧಿಸಿ ಬರುವ ದಿನಾಂಕ 31 ರಂದು ಬೆಳಗಾವಿಯಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಮಹಿಳಾ ರೈತ ಸಂಘದ ರಾಜ್ಯಾಧ್ಯಕ್ಷೆ ಚುಕ್ಕಿ ನಂಜುಂಡ ಸ್ವಾಮಿ, ಕೆ ಟಿ ಗಂಗಾಧರ, ನಂಜುಂಡಸ್ವಾಮಿ, ರೈತ ಮುಖಂಡರಾದ ಕಲ್ಯಾಣರಾವ್ ಮುಚಳಂಬಿ, ಸುರೇಶ ರಾಯಪ್ಪಗೋಳ, ಸಂಜು ಮುರಗೋಡ, ಕೆ ಜಿ ಪಾಟೀಲ್, ಮಹಾಂತೇಶ್ ಸೋಪಿನ, ಶಂಕರ ಅಂಬಲಿ, ಅಜ್ಜನಿ ಶಿವಪ್ಪ, ವಿದ್ಯಾಸಾಗರ ರಾಮೇಗೌಡ ಸೇರಿದಂತೆ ನೂರಾರು ರೈತರು ಇದ್ದರು.
ನಾಗವೇಣಿ ಹೂಲಿಕೇರಿ ನಿರೂಪಿಸಿ ವಂದಿಸಿದರು.