ಕೃಷಿ ಪತ್ತಿನ ಸಂಘದ ಚುನಾವಣೆ: ಅವಿರೋಧ ಆಯ್ಕೆ
ಸವದತ್ತಿ 28: ಪಟ್ಟಣದ ವಾರ್ಡ ನಂ.4ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸುಭಾಸಸಿಂಗ್ ಹೀರಾಸಿಂಗ್ ರಜಪುತ ಅಧ್ಯಕ್ಷರಾಗಿ ಹಾಗೂ ನಿಂಗಪ್ಪ ಗೊರವನಕೊಳ್ಳ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಅಶೋಕ ಮೊಕಾಶಿ, ಕಲ್ಲವ್ವ ಅಂಗಡಿ, ತುಳಸಾಬಾಯಿ ಜಯಸಿಂಗ ರಜಪೂತ, ಸಾಬಣ್ಣಾ ವರವಣ್ಣವರ, ನಾಗರಾಜ ಬಟಕುರ್ಕಿ, ಈರಪ್ಪ ಚಿಕ್ಕುಂಬಿ, ಮಹಾದೇವಪ್ಪ ಹಂಚಿನಾಳ, ನಿಂಗಪ್ಪ ನರಗುಂದ, ವಿರುಪಾಕ್ಷಪ್ಪ ಕಡಕೋಳ, ವಿರುಪಾಕ್ಷಪ್ಪ ಜಕಾತಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬಸವರಾಜ ಎಸ್ ಹಡಪದ ಹಾಗೂ ಸಿಬ್ಬಂದಿಗಳಾಗಿ ಮೋಹನ ಮುನವಳ್ಳಿ, ಪ್ರದೀಪ ಪ್ರಭುನವರ. ಲಾಲಸಾಬ ಅಪರಾದನವರ ಕಾರ್ಯನಿರ್ವಹಿಸಿದ್ದಾರೆ