ರಾಷ್ಟ್ರೀಯ

ತಮಿಳುನಾಡು: ಮೊಸಳೆ ದಾಳಿಗೆ ರೈತ ಬಲಿ

ತಮಿಳುನಾಡು: ಮೊಸಳೆ ದಾಳಿಗೆ ರೈತ ಬಲಿ

ಚಿದಂಬರಂ, ಸೆಪ್ಟೆಂಬರ್ 29: ಇಲ್ಲಿಗೆ ಸಮೀಪದ ವೇಲಕುಡಿಯ ಕೊಲೆರೂನ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ 56 ವರ್ಷದ ರೈತನೋರ್ವ ಮೊಸಳೆ ದಾಳಿಯಿಂದ ಸಾವನ್ನಪ್ಪಿರುವ ಘೋರ ಘಟನೆ ಸೋಮವಾರ ರಾತ್ರಿ ನಡೆದಿದೆ. 

ಮಂಗಳವಾರ ನತದೃಷ್ಟ ರೈತನನ್ನು ಪಳನಲ್ಲೂರು ಗ್ರಾಮದ ನಿವಾಸಿ ಮುನುಸ್ವಾಮಿ ಅಲಿಯಾಸ್ ಅರಿವಾನಂತಂ ಎಂದು ಗುರುತಿಸಲಾಗಿದ್ದು,  ಕೃಷಿ ಕೆಲಸ ಮುಗಿದ ನಂತರ ಸ್ನಾನ ಮಾಡುತ್ತಿದ್ದಾಗ ಮೊಸಳೆ ಆತನನ್ನು ನೀರಿಗೆ ಎಳೆದೊಯ್ದಿದೆ. ಮೊಸಳೆ ದಾಳಿಗೆ ಸಿಕ್ಕ ರೈತನ ಕಿರುಚಾಟವನ್ನು ಕೇಳಿದ ದಾರಿಹೋಕರು ಆತನನ್ನು ರಕ್ಷಿಸಲು ಪ್ರಯತ್ನಿಸಿದರಾದರೂ,  ಮೊಸಳೆ ತನ್ನ ಬಲಿಷ್ಠ ದವಡೆಯಿಂದ ಆತನನ್ನು ನದಿಯ ಆಳಕ್ಕೆ ಎಳೆದೊಯ್ದಿದೆ.

ಮಾಹಿತಿ ದೊರೆತ ತಕ್ಷಣವೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದಾರೆ. ಆದರೆ ಕತ್ತಲೆಯಾದ್ದರಿಂದ ಮುನುಸಾಮಿ ಪತ್ತೆ ಸಾಧ್ಯವಾಗಿರಲಿಲ್ಲ.    

ಮಂಗಳವಾರ ಮಧ್ಯಾಹ್ನ ರಕ್ಷಣಾ ತಂಡ ಮೃತದೇಹವನ್ನು ವಶಪಡಿಸಿಕೊಂಡಿದೆ. ನತದೃಷ್ಟ ರೈತ ಮೊಸಳೆ ದಾಳಿಯಿಂದ ಮೃತಪಟ್ಟಿರಬಹುದು ಇಲ್ಲವೇ ಹಾವು ನೀರಿಗೆ ಎಳೆದೊಯ್ದು ಆತ ಮುಳುಗಿ ಸಾವನ್ನಪ್ಪಿರಬಹುದು ಎಂದು ಮೂಲಗಳು ತಿಳಿಸಿವೆ.

ಆದರೆ, ಪ್ರತ್ಯಕ್ಷದರ್ಶಿಗಳ ಹೇಳುವಂತೆ ಮಂಗಳವಾರ ಮಧ್ಯಾಹ್ನ ಮುನುಸಾಮಿಯ ಮೃತದೇಹ ಮೊಸಳೆ  ದವಡೆಯಲ್ಲಿ ಸಿಕ್ಕಿರುವುದನ್ನು ನೋಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸರೀಸೃಪವನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಭಾರಿ ಶೋಧ ನಡೆಸಿದ್ದಾರೆ.  

ಸುದ್ದಿ ಓದಿ