ಸಾಲದ ಬಾದೆ ತಾಳದ ರೈತ ವಿರೇಶ ಲಮಾಣಿ ಸಾವಿಗೆ ಶರಣು.
ರಾಣೇಬೆನ್ನೂರು 11: ಸಾಲದ ಬಾದೆ ತಾಳಲಾರದೇ ಮಾನಸಿಕವಾಗಿ ನೊಂದುಕೂಂಡ ರೈತ ನೋರ್ವನು ತನ್ನ ಮನೆಯಲ್ಲಿ ನೆಣು ಬಿಗಿದುಕೂಂಡು ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ಗುರುವಾರ ಸಂಜೆ ತಾಲೂಕಿನ ಗಂಗಾಜಲ ತಾಂಡೆಯ ಮನೆಯೊಂದರಲ್ಲಿ ಸಂಭವಿಸಿದೆ.
ತಾಂಡೆಯ ರೈತ ವಿರೇಶ ವಿರೂಪಾಕ್ಷಪ್ಪ ಲಮಾಣಿ (33) ಎಂಬಾತನೇ ಸಾವಿಗೆ ಶರಣಾದ ವ್ಯಕ್ತಿ ಇತನು ನಿನ್ನೆ ಸಾಯಂಕಾಲ ಮನೆಯಲ್ಲಿ ಪತ್ನಿ ಹೂರಗಡೆ ಹೂದ ಸಂಧರ್ಭದವನ್ನು ಗಮನಿಸಿ ಫ್ಯಾನಿಗೆ ನೇಣು ಬಿಗಿದುಕೂಂಡಿದ್ದಾನೆ. ಅಷ್ಟರಲ್ಲಿ ಪತ್ನಿ ಧಾವಿಸಿ ಕದ ತೆಗೆದಿದ್ದು ನೇಣು ಕಂಡ ಪತ್ನಿ ತಕ್ಷಣವೇ ನೆರೆ ಹೂರೆಯವರ ಸಹಕಾರದಿಂದ ಸ್ಥಳಿಯ ಅಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಸಾವು ಕಂಡಿರುವ ಕುರಿತು ವೈದ್ಯರು ಖಚಿತಪಡಿಸಿದರು. ಇತನ ಸಾವಿನಿಂದ ಪತ್ನಿ ಇರ್ವರು ಪುತ್ರರು ಓರ್ವ ಪುತ್ರಿ ಅಕ್ಷರಸ ಅನಾಥರಾಗಿದ್ದಾರೆ.
ಮೃತ ರೈತ ವಿರೇಶ ಲಮಾಣಿ ಇತನು ಕೆನರಾ ಬ್ಯಾಂಕಿನಲ್ಲಿ 1 ಲಕ್ಷ, ಧರ್ಮಸ್ಥಳ ಸಂಘದ ಕುಟುಂಬದ ಹೆಸರಿನಲ್ಲಿ 50 ಸಾವಿರ ಇತರ ಕೈಗಡವಾಗಿ 4 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದನೇಂದು ಹೇಳಲಾಗಿದೆ
ಪರಿಹಾರಕ್ಕೆ ಆಗ್ರಹ: ಸ್ಥಳಕ್ಕೆ ಧಾವಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಕೃಷ್ಣಮೂರ್ತಿ ಲಮಾಣಿ ಅವರು ಕುಟುಂಬಕ್ಕೆ ಸಾಂತ್ವನ ನೀಡಿ ವಿಧಿ ವಿಧಾನಗಳನ್ನು ನೆರವೇರಿಸಲು ಸಹಕಾರ ನೀಡುವುದರ ಮೂಲಕ ತಮ್ಮ ಮಾನವೀಯತೆ ಮೇರೆದಿದ್ದಾರೆ. ಸರ್ಕಾರ ಮೃತ ರೈತನ ಕುಟುಂಬಕ್ಕೆ ಕನಿಷ್ಟ 20 ಲಕ್ಷ ರೂಗಳ ಪರಿಹಾರ ನೀಡಬೇಕು ಮತ್ತು ಆತನ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕ್ರಮ ಕೈಗೂಳ್ಳಬೇಕೆಂದು ಆಗ್ರಹಿಸಿದರು.