ತೋಟದ ಕಾರ್ಮಿಕರನ್ನು ಎಂದು ಕೆಲಸಗಾರರಂತೆ ನೋಡಿಲ್ಲ : ವರುಣಗೌಡ ಪಾಟೀಲ
ಶಿಗ್ಗಾವಿ 12: ತಂದೆಯವರಾದ ದಿವಂಗತ ಎಮ್.ಸಿ ಪಾಟೀಲ ಅವರು ಹಾಕಿಕೊಟ್ಟ ಮಾರ್ಗದರ್ಶದಲ್ಲಿ ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದೆವೆ ಆ ಕೆಲಸಗಳಲ್ಲಿ ಸಂತೋಷವಿದೆ ಎಂದು ರೈತಸೇನಾ ಕರ್ನಾಟಕ ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು.
ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಏರಿ್ಡಸಿದ ಕೃಷಿ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಮನೆಯಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ನಾವು ಎಂದಿಗೂ ಕೆಲಸಗಾರರಂತೆ ನೋಡಿಲ್ಲ ನಮ್ಮ ತಂದೆಯವರು ಸಹ ಮನೆಯ ಮಕ್ಕಳಂತೆ ನೋಡಿಕೊಂಡು ಬಂದಿದ್ದರು ಆ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಬಂದಿದ್ದೆವೆ ನಮ್ಮ ಸಾಮಾಜಿಕ ಕಾರ್ಯಗಳಿಗೆ ಎಲ್ಲರು ಬೆನ್ನೆಲುಬಾಗಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಬರುವ ಜನೇವರಿಯಲ್ಲಿ ನಮ್ಮ ತೋಟದ ಎಲ್ಲ ಕಾರ್ಮಿಕರನ್ನು ವಿಮಾನದ ಮೂಲಕ ದೆಹಲಿ ಪ್ರವಾಸ ಮಾಡಿಸುತ್ತಿದ್ದೇನೆ ಅವರ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗಿರುವ ಖುಷಿ ಇದೆ ಎಂದರು.
ಶರೀಫ ಮಾಕಪ್ಪನವರ ಮಾತನಾಡಿ ವರುಣಗೌಡ ಪಾಟೀಲ ಅವರು ಅವರ ತಂದೆಯವರ ಕಾಲದಿಂದಲೂ ಬಡವರ ದ್ವನಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಅನೇಕ ಕಷ್ಟದ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಅನೇಕ ರೀತಿಯ ಸೇವೆಯನ್ನು ಮಾಡಿದ್ದಾರೆ ಇಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲ ಕೃಷಿ ಕಾರ್ಮಿಕರಿಗೆ ಸನ್ಮಾನ ಮಾಡಿ ಸಿಹಿ ಹಂಚಿ ಹಬ್ಬದ ಶುಭಾಷಯ ತಿಳಿಸುತ್ತಿರುವುದು ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ತಾರಕೇಶ ಮಠದ, ರೈತ ಕಾರ್ಮಿಕರಾದ ಮಾಂತೇಶ ಓಲೇಕಾರ,ಸುರೇಶ ಭೀಮನವರ, ಮುತ್ತು, ಕೋಟೆಪ್ಪ ಸಂಜೀವಣ್ಣನವರ, ಚನ್ನಬಸಪ್ಪ ಸುಣಗಾರ, ಮಾಬುಲಿ ಮತ್ತೇಖಾನ, ದೇವೆಂದ್ರ ಗೊಟಗೋಡಿ, ಹನಮಂತಪ್ಪ ಚಲವಾದಿ, ಬಸವರಾಜ ಕುರಗೋಡಿ ಎಸ್.ಡಿ.ನಂದೀವಾಡ ಹಾಗೂ ಇತರರು ಹಾಜರಿದ್ದರು.