ರಾಷ್ಟ್ರೀಯ

ಕೃಷಿ ಮಸೂದೆ ಗದ್ದಲ; ಲೋಕಸಭಾ ಕಲಾಪಕ್ಕೆ ಅಡ್ಡಿ

ಕೃಷಿ ಮಸೂದೆ ಗದ್ದಲ; ಲೋಕಸಭಾ ಕಲಾಪಕ್ಕೆ ಅಡ್ಡಿ

ನವದೆಹಲಿ, ಸೆ 22 :ಕೃಷಿ ಮಸೂದೆಗಳ ಕುರಿತು ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಲೋಕಸಭಾ ಕಲಾಪವನ್ನು ಒಂದು ಗಂಟೆಯ ಅವಧಿಗೆ ಮುಂದೂಡಲಾಯಿತು. 

ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಕಳೆದ 11 ವರ್ಷಗಳಲ್ಲಿ ಗೋಧಿಗೆ ಅತಿ ಕಡಿಮೆ ಅಂದರೆ 50 ರೂ. ಕನಿಷ್ಠ ಬೆಲೆ ಘೋಷಿಸಲಾಗಿದೆ ಎಂದು ಆರೋಪಿಸಿದರು. ಸರ್ಕಾರದ ಕೃಷಿ ವಿರೋಧ ಧೋರಣೆ ವಿರೋಧಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್‌ನ ಶೇ.90ರಷ್ಟು ರೈತರು ಬೀದಿಯಲ್ಲಿಯೇ ಇದ್ದಾರೆ ಎಂದರು. 

ಆಗ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಸದಸ್ಯ ಕಲ್ಯಾಣ್‌ ಬ್ಯಾನರ್ಜಿ ಕೂಡ ರಂಜನ್‌ಗೆ ಬೆಂಬಲ ಸೂಚಿಸಿದರು. ನಂತರ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದಾಗ ಸ್ಪೀಕರ್ ಸದನವನ್ನು ಒಂದು ಗಂಟೆಯ ಕಾಲ ಮುಂದೂಡಿದರು.


ಸುದ್ದಿ ಓದಿ