ಪವಿತ್ರ ಧಾರ್ಮಿಕ ಯಾತ್ರೆಗೆ ಬೀಳ್ಕೋಡುಗೆ
ಶಿಗ್ಗಾವಿ,03 : ತಾಲೂಕಿನ ತೋರೂರು ಗ್ರಾಮದ ವಿದ್ಯುತ್ ಗುತ್ತಿಗೆದಾರ ಅಬ್ದುಲ ಹರಪನಹಳ್ಳಿ ಹಾಗೂ ಅವರ ಪತ್ನಿಯನ್ನು ಉಮ್ರ ಪವಿತ್ರ ಧಾರ್ಮಿಕ ಯಾತ್ರೆಗೆ ಬೀಳ್ಕೊಟ್ಟ ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಮಂಜುನಾಥ ಮಣ್ಣಣ್ಣವರ ಮಾತನಾಡಿ ಮುಸಲ್ಮಾನ್ ಸಮುದಾಯದಲ್ಲಿ ಹಜ್ ಮತ್ತು ಉಮ್ರಾ ಧಾರ್ಮಿಕ ಯಾತ್ರೆಗಳು ಅತ್ಯಂತ ಪ್ರಮುಖವಾಗಿದ್ದು ಯಾತ್ರೆ ಯಶಸ್ವಿಯಾಗಲಿ ಸುರಕ್ಷಿತವಾಗಿರಲಿ ಹಾಗೂ ಮನುಕುಲದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ ಎಂದು ಯಾತ್ರಾಥಿರ್ಗಳಿಗೆ ಶುಭ ಕೋರಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆ ಅಧಿಕಾರಿಗಳಾದ ಎಇಇ ನೀರಲಗಿ, ಶಿವಾನಂದ ಹಾದಿಮನಿ, ಬಸವರಾಜ ಬಂಡಿವಡ್ಡರ, ಬಿಡಿ ಕಲ್ಯಾಣಕರ, ಎನ್ ವಿ ಪೂಜಾರ, ಡಿ ಎಚ್ ಮಾಲ್ತೇಶ್ ಅಜ್ಜಣ್ಣವರ ಗುತ್ತಿಗೆದಾರ ಸಂಘದ ಅಧ್ಯಕ್ಷ ಎನ. ಎಸ. ಹಿರೇಮಠ, ಕೆ.ಟಿ ಪಾಟೀಲ, ಚಂದ್ರು ಕೊಪ್ರಡೇ, ನವೀನ ಇಂಗಳಗಿ, ಶಿವರಾಜ, ಸುರೇಶ ಬಿಸನಹಳ್ಳಿ ,ಮುದುಕಪ್ಪ ಹೊನ್ನಳ್ಳಿ, ವೀರಣ್ಣ ಎಲಿಗಾರ, ಸಂಘದ ಇತರ ಸದಸ್ಯರು ಹೆಸ್ಕಾಂ ಇಲಾಖೆಯ ನೌಕರರು ಉಪಸ್ಥಿತರಿದ್ದರು.