ಹೊಸಪೇಟೆ

ಹಣಕಾಸು ಅಧಿಕಾರಿ ಡಾ.ಕೆ. ದಿನೇಶ್ ಗೆ ಬೀಳ್ಕೊಡುಗೆ

ಹಣಕಾಸು ಅಧಿಕಾರಿ  ಡಾ.ಕೆ. ದಿನೇಶ್ ಗೆ  ಬೀಳ್ಕೊಡುಗೆ

ಹಂಪಿ,31: ಕನ್ನಡ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಕೆ. ದಿನೇಶ್ ಇವರು ಹಾವೇರಿಗೆ ಮುಖ್ಯ ಲೆಕ್ಕ ನಿಯಂತ್ರಕರು ಆಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ 31ನೇ ಜುಲೈ 2024 ರಂದು ಸಿಂಡಿಕೇಟ್ ಸಭಾಂಗಣದಲ್ಲಿ ಅವರಿಗೆ ಗೌರವ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. 

ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಸ್ವಾಗತಿಸಿದರು. ಉಪಕುಲಸಚಿವರು,ಆಡಳಿತ ವಂದನೆ ಸಲ್ಲಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು, ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕುಲಪತಿ ಹಣಕಾಸು ಅಧಿಕಾರಿ, ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಿಸಿ, ಬೀಳ್ಕೊಟ್ಟರು. 


ಸುದ್ದಿ ಓದಿ