ಸೌಂದತ್ತಿ

ಆನಂದ ಮಾಮನಿ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಅಭಿಮಾನಿಗಳು ದೇವರ ಮೊರೆ

ಆನಂದ ಮಾಮನಿ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಅಭಿಮಾನಿಗಳು ದೇವರ ಮೊರೆ

ಲೋಕದರ್ಶನ ವರದಿ 

ಸವದತ್ತಿ 16: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ಕೂಡಲೆ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. 

ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ದೀರ್ಘ ದಂಡ ನಮಸ್ಕಾರದೊಂದಿಗೆ ಉರಳು ಸೇವೆ ಮಾಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಅಭಿಮಾನಿಗಳು ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಮಹಾಮೃತ್ಯುಂಜಯ ಹೋಮವನ್ನು ಕೈಗೊಂಡು ತಮ್ಮ ನಾಯಕನ ಆರೋಗ್ಯದಲ್ಲಿ ಕೂಡಲೆ ಚೇತರಿಕೆಯಾಗಲೆಂದು ಪೂಜೆ ಸಲ್ಲಿಸಿದ್ದಾರೆ. 

ಶುಕ್ರವಾರದಂದು ಮಾಮನಿ ಕಲ್ಯಾಣ ಮಂಟಪದಲ್ಲಿ ಹೂಲಿಯ ವೇದಮೂರ್ತಿ ಅಜ್ಜಯ್ಯ ಶಾಸ್ತ್ರಿಗಳು, ವೀರಪುರದ ಚೇತನ ಶಾಸ್ತ್ರಿಗಳು, ಈರಯ್ಯ ಶಾಸ್ತ್ರಿಗಳ ವೈದಿಕತ್ವದಲ್ಲಿ ಮಹಾ ಗಣಪತಿ ಪೂಜೆಯೊಂದಿಗೆ ಮಹಾಮೃತ್ಯುಂಜಯ ಹೋಮವನ್ನು ಕಲ್ಮಠದ ಶಿವಲಿಂಗ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಆನಂದ ಮಾಮನಿಯವರ ಸುಪುತ್ರ ಚಿನ್ಮಯಿ ಮಾಮನಿ ಹಾಗೂ ಅಭಿಮಾನಿಗಳ  ಸಮ್ಮುಖದಲ್ಲಿ ನೆರವೇರಿಸಲಾಯಿತು. 

ಪ್ರಮುಖರಾದ ಜಗದೀಶ ಶಿಂತ್ರಿ, ಅಲ್ಲಮಪ್ರಭು ಪ್ರಭುನವರ, ಐ.ಪಿ.ಪಾಟೀಲ, ಸುನೀಲ ಸುಳ್ಳದ, ಈರಣ್ಣ ಚಂದರಗಿ, ವಿರುಪಾಕ್ಷ ಹನಸಿ, ರಮೇಶ ಗೋಮಾಡಿ, ಕುಮಾರಸ್ವಾಮಿ ತಲ್ಲೂರಮಠ, ಪುಂಡಲೀಕ ಮೇಟಿ, ಬಸವರಾಜ ಬಾರ್ಕಿ, ವೈ.ವೈ.ಕಾಳಪ್ಪನವರ, ಕೊಳೆಪ್ಪಗೌಡ ಗಂದಿಗವಾಡ, ಜಗದೀಶ ಕೌಜಗೇರಿ, ಉಲ್ಲಾಸ ಕಲ್ಲೂರ, ಬಿ.ಎನ್‌.ಹಿರೇಮಠ, ರಾಜು ಸಾಲಿಮಠ ಹಾಗೂ ಅಭಿಮಾನಿಗಳು ಮಹಾಮೃತ್ಯುಂಜಯ ಹೋಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ