ಪ್ರಸಿದ್ಧ ಗಾಯಕರು ಮಹಮ್ಮದ್ ರಫಿ ಅವರ ಜನ್ಮ ದಿನ
ಸಿರುಗುಪ್ಪ26: ಸಂಗೀತ ಹಾಗೂ ಗಾಯನಕ್ಕೆ ಜಾತಿ ಮತ ಪಂಥದ ಭೇದವಿಲ್ಲ ಸುಪ್ರಸಿದ್ಧ ಹಿನ್ನೆಲೆ ಗಾಯಕ ಸಂಗೀತ ಪ್ರಿಯರ ಹೃದಯ ಸಾಮ್ರಾಟ ಮೊಹಮ್ಮದ್ ರಫಿ ಯವರ 99ನೇ ಜನ್ಮದಿನವನ್ನು ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಸಾಹಿತಿ ಗಾಯಕ ಬಹುಭಾಷಾ ಕವಿ ಅಬ್ದುಲ್ ನಬಿ ಅವರು ರಫಿ ಅವರನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಸಂಗೀತ ಕಲಾ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ಅವರ ಹಾಡನ್ನು ನಬಿಯವರು ಹಾಡಿದರು ಮಹಮ್ಮದ್ ರಫಿ ಅವರು 24 ಡಿ. 1924 ರಂದು ಪಂಜಾಬ್ ಪ್ರಾವಿನ್ಸ್ ನಲ್ಲಿ ಜನಿಸಿದರು ರಫಿ ಅವರ ಅಣ್ಣ ಹಮೀದ್ ಅವರ ಅಂಗಡಿಯಲ್ಲಿ ಮಹಮ್ಮದ್ ರಫಿ ಹಾಡುವುದನ್ನು ಗುರುತಿಸಿ ಸುಪ್ರಸಿದ್ಧ ಸಂಗೀತ ಕಾರ ಮೊಹಮ್ಮದ್ ನೌಶಾದ್ ಅಲಿ ಯವರಿಗೆ ಪರಿಚಯ ಮಾಡಿಸಿದರು 13 ವರ್ಷ ವಯಸ್ಸಿನಲ್ಲಿ ಕೆಎಲ್ ಸೈಗಲ್ ಅವರ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ಪಡೆದ ಮೊಹಮ್ಮದ್ ರಫಿ ಅವರು ಸತತವಾಗಿ ಉನ್ನತ ಶಿಖರಕ್ಕೆ ಏರಿದರು 30, ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಮೊಹಮ್ಮದ್ ರಫಿ ಅವರಿಗೆ ಹೃದಯಘಾತವಾಗಿ ಇಹಲೋಕಕ್ಕೆ ತ್ಯಜಿಸಿದಾಗ ಅಂತ್ಯ ಸಂಸ್ಕಾರದ ಯಾತ್ರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಆ ಸಮಯದಲ್ಲಿ ವಿವಿಧ ಗಣ್ಯರ ಸಾವಿನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನರನ್ನು ಮೀರಿಸಿತ್ತು ಮೊಹಮ್ಮದ್ ರಫಿ ಅವರ ಜನಪ್ರಿಯತೆಗೆ ಇದು ಸಾಕ್ಷಿ ಎಂದು ಅಬ್ದುಲ್ ನಬಿ ಹೇಳಿದರು ಪ್ರಮುಖ ಮುಖಂಡರಾದ ಹಾಜಿ ಹಂಡಿ ಹುಸೇನ್ ಭಾಷಾ, ಹಂಡಿ ಹಾಶಿಮ್, ಹಂಡಿ ಹುಸೇನ್ ಸಾಬ್, ಮೊಹಮ್ಮದ್ ರಫಿ ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ನೌಶಾದ್ ಅಲಿ, ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಬಿಕೆ ಅಲ್ಲಾಭಕ್ಷಿ, ಖತೀರುದ್ದೀನ್ ಬಾಬು,ಜೆ ನಾಗೇಂದ್ರ ಗೌಡ ಇದ್ದರು.