ಸಿರುಗುಪ್ಪ

ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ 95ನೇ ಜನ್ಮದಿನ

ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ 95ನೇ ಜನ್ಮದಿನ

ಸಿರುಗುಪ್ಪ-ಸಂತೋಷದ ಕ್ಷಣಗಳಿಗೆ ಕಾಯಬಾರದು ಪ್ರತಿ ಕ್ಷಣಗಳನ್ನು ಸಂತಸಮಯವಾಗಿಸಿಕೊಳ್ಳಬೇಕು ನಾವು ಹಾಡುವುದಕ್ಕಿಂತ ಹೆಚ್ಚು ಆಲಿಸಿ ಅರ್ಥಮಾಡಿಕೊಳ್ಳಬೇಕು ಎಂದು ಸಾಹಿತಿ ಕವಿ ಗಾಯಕ ಕನ್ನಡ ಸಾಹಿತ್ಯ ಪರಿಷತ್ ಸಾಕ್ಷರತಾ ಸದಸ್ಯ ಅಬ್ದುಲ್ ನಬಿಯವರು ಅಭಿಪ್ರಾಯಪಟ್ಟರು ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ 95ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಕಿಶೋರ್ ಕುಮಾರ್ ಭಾರತೀಯ ಸಂಗೀತ ಉದ್ಯಮದ ಅತಿ ದೊಡ್ಡ ಹೆಸರು ಸುಮಧುರ ಕಂಠದ ರಾಜ  ಅವರು ತಮ್ಮ ಸುಧೀರ್ಘ ವೃತ್ತಿ ಜೀವನದಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ  ಅವರು ಕೇವಲ ಶ್ರೇಷ್ಠ ಗಾಯಕರಾಗಿರಲಿಲ್ಲ ಆದರೆ ಅದ್ಭುತ ನಟ ಕೂಡ ಅವರು ಆಗಿದ್ದರು ಎಂದು ಅಬ್ದುಲ್ ನಬಿಯವರು ಹೇಳಿದರು.

ಸುದ್ದಿ ಓದಿ