ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಮುಖವಾಡ: ಬಂಧನ, ಆರೋಪಿ ಜೈಲಿಗೆ

ರಾಣೇಬೆನ್ನೂರಲ್ಲಿ ನಕಲಿ ಎಸಿಬಿ ಅಧಿಕಾರಿ ಮುಖವಾಡ: ಬಂಧನ, ಆರೋಪಿ ಜೈಲಿಗೆ

ರಾಣೇಬೆನ್ನೂರು 28:  ತಾನೊಬ್ಬ ಎಸಿಬಿ ಅಧಿಕಾರಿ ಎಂದು ಸ್ಥಳೀಯ ನಗರಸಭೆಯಲ್ಲಿ ಅಧಿಕಾರಿಗಳನ್ನು ವಂಚನೆ ಮಾಡಿದ್ದ ನಕಲಿ ಅಧಿಕಾರಿಯನ್ನು ಇದೀಗ ಶಹರ ಠಾಣೆಯ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತ ನಕಲಿ ಎಸಿಬಿ ಅಧಿಕಾರಿಯು ಬೆಂಗಳೂರು, ಹಲಸೂರು, ನಿವಾಸಿಯಾದ ಇತನು ಜಾನ್‌ಮ್ಯಾಥೂ ಅಲಿಯಾಸ್ ಕೆಪಿ ಮ್ಯಾಥೂ ಎಂದು ಗುರುತಿಸಲಾಗಿದೆ.  

ಇಲ್ಲಿನ ನಗರಸಭೆಯ ಇಂಜೀನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ ಗುಡಿಸಲಮನಿ, ಎಂಬುವರಿಗೆ ನಾನು ಎಸಿಬಿ ಅಧಿಕಾರಿ ಇತ್ತೀಚೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ಲಿಸ್ಟ್‌ ಒಳಗೆ ನಿಮ್ಮ ಹೆಸರು ಇದೆ, ಅಂತ ಹೆದರಿಸಿದ್ದಾನೆ. ಮೋಸ ಮಾಡುವ ಉದ್ದೇಶದಿಂದ ಅಧಿಕಾರಿಗೆ ನೀವು ಹಣ ನೀಡಿದರೆ ನಮ್ಮ ಮೇಲಿನ ಎಸಿಬಿ ಅಧಿಕಾರಿಗಳಿಗೆ ಹೇಳಿ ನಿಮ್ಮ ಹೆಸರನ್ನು ಆ ಲಿಸ್ಟ್‌ನಿಂದ ತೆಗೆಸುತ್ತೇನೆ. ಅಂತ ಹಣದ ಆಮೀಶ ಒಡ್ಡಿದ್ದಾನೆ.ನಂತರ ಈ ವಿಷಯವನ್ನು ನಗರಸಭೆ ಪೌರಾಯುಕ್ತರಾದ ಉದಯಕುಮಾರ ಬಿ.ಟಿ. ಅವರ ಗಮನಕ್ಕೆ ತಂದ ತಕ್ಷಣ ಅವರು ಶಹರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲೀಸರು ತಕ್ಷಣ ಪ್ರಕರಣ ದಾಖಲಿಸಿಕೂಂಡು, ನಕಲಿ ಎಸಿಬಿ ಅಧಿಕಾರಿಯನ್ನು ಬಂದಿಸಿ ಆತನ ಮೇಲೆ ಐಪಿಸಿ ಸೆಕ್ಷನ್ 385, 419, 420, 511 ಅಡಿಯಲ್ಲಿ ಪ್ರಕರಣ ದಾಖಲಿಸಿಕೂಂಡು ತನಿಖೆ ನಡೆಸುತ್ತಿದ್ದಾರೆ.  

ಅಲ್ಲದೇ ಬಂದಿತ ಆರೋಪಿಯಾದ ಕೆ.ಪಿ ಮ್ಯಾಥೂ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳಿಸಿದ್ದಾರೆ. 


ಸುದ್ದಿ ಓದಿ