ಸಮಸ್ಯೆ ಎದುರಿಸಿ ಬದುಕು ಕಟ್ಟಿಕೊಳ್ಳಿ: ಶಾಸಕ ಹುಕ್ಕೇರಿ ಸಲಹೆ
ಲೋಕದರ್ಶನ ವರದಿ
ಚಿಕ್ಕೋಡಿ 04: ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆ ಎದುರಿಸಿ ಮುನ್ನಡೆಯಬೇಕು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳ ಬಾರದು ಎಂದು ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ರೈತರಲ್ಲಿ ಮನವಿ ಮಾಡಿದರು.
ಚಿಕ್ಕೋಡಿ ತಾಲೂಕಿನ ನೇಜ ಗ್ರಾಮಕ್ಕೆ ಭೇಟಿ ನೀಡಿ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಾದ ಶಿವಾಜಿ ಹೇರವಾಡೆ ಹಾಗೂ ಜಗದೀಶ ಹೊನ್ನಮನಿ ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂಪಾಯಿಗಳ ಪರಿಹಾರದ ಆದೇಶ ಪ್ರತಿಯನ್ನು ಶಾಸಕರು ಹಸ್ತಾಂತರಿಸಿ ಮಾತನಾಡಿದರು.
ಸಾಲಬಾಧೆ, ಬೆಳೆ ನಷ್ಟದಂತಹ ವಿಚಾರಗಳಿಗೆ ಹೆದರಿ ರೈತರು ಆತ್ಮಹತ್ಯೆ ಯಂತಹ ದುಡುಕು ನಿರ್ಧಾರ ಕೈಗೊಳ್ಳಬಾರದು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸಮಸ್ಯೆ ಎದುರಿಸಿ ಮುನ್ನಡೆಯಬೇಕು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳ ಬಾರದು ಎಂದು ಹೇಳಿದರು.
ಕೃಷಿ ಇಲಾಖೆ ಅಧಿಕಾರಿಗಳಾದ ಮಂಜುನಾಥ ಕಿತ್ತೂರ, ಹಂಪ್ಪನ್ನವರ, ಕೌಜಲಗಿ, ಅರುಣ ಬೋನೆ, ಅಪ್ಪು ಸುಟ್ಟಟ್ಟಿ, ಪ್ರಕಾಶ ಮಗದುಮ್ಮ, ಶ್ರೀಶೈಲ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತಿದ್ದರು.