ರಾಷ್ಟ್ರೀಯ

ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ರಫೇಲ್ ಚಲಾಯಿಸಲಿರುವ ಮೊದಲ ಮಹಿಳಾ ಪೈಲೆಟ್

ಫ್ಲೈಟ್  ಲೆಫ್ಟಿನೆಂಟ್  ಶಿವಾಂಗಿ ಸಿಂಗ್   ರಫೇಲ್ ಚಲಾಯಿಸಲಿರುವ  ಮೊದಲ  ಮಹಿಳಾ ಪೈಲೆಟ್

ಫ್ಲೈಟ್  ಲೆಫ್ಟಿನೆಂಟ್  ಶಿವಾಂಗಿ ಸಿಂಗ್   ರಫೇಲ್ ಚಲಾಯಿಸಲಿರುವ  ಮೊದಲ  ಮಹಿಳಾ ಪೈಲೆಟ್

ನವದೆಹಲಿ 23  ಭಾರತೀಯ ವಾಯುಪಡೆಗೆ  ಸೇರ್ಪಡೆಗೊಂಡಿರುವ  ಅತ್ಯಾಧುನಿಕ  ರಫೇಲ್ ಯುದ್ಧ ವಿಮಾನ  ಚಲಾಯಿಸುವ ಮೊದಲ  ಮಹಿಳಾ  ಪೈಲೆಟ್   ಎಂಬ  ಹೆಗ್ಗಳಿಕೆಗೆ     ಫ್ಲೈಟ್  ಲೆಫ್ಟಿನೆಂಟ್  ಶಿವಾಂಗಿ ಸಿಂಗ್   ಪಾತ್ರರಾಗಲಿದ್ದಾರೆ.

 2017 ರಲ್ಲಿ  ಭಾರತೀಯ  ವಾಯುಪಡೆ  ಸೇರಿದ  ಶಿವಾಂಗಿ  ಸಿಂಗ್   ಮಹಿಳೆಯರ   ಎರಡನೇ ತಂಡದಲ್ಲಿ   ಯುದ್ಧ ವಿಮಾನಗಳ  ಪೈಲಟ್ ಆಗಿ ತರಬೇತಿ ಪಡೆದುಕೊಂಡರು.  ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ  ಸೇರಿದ   ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಶೀಘ್ರದಲ್ಲೇ ಅಂಬಾಲಾದಲ್ಲಿರುವ  17 ನೇ ಸ್ಕ್ವಾಡ್ರನ್‌  ಗೆ ಸೇರಿದ   ರಫೆಲ್ 'ಗೋಲ್ಡನ್  ಯೂರೂಸ್”  ಭಾಗವಾಗಲಿದ್ದಾರೆ.

ಇದಕ್ಕಾಗಿ ಅವರು ವಿಶೇಷ ತರಬೇತಿ ಪಡೆಯಲಿದ್ದಾರೆ.  ಮಿಗ್ -21 ಬೈಸನ್  ಯುದ್ಧ  ವಿಮಾನಗಳನ್ನು  ಚಲಾಯಿಸಿರುವ  ಶಿವಾಂಗಿ ಸಿಂಗ್,  ರಾಜಸ್ಥಾನ ವಾಯುನೆಲೆಯಿಂದ ಅಂಬಾಲಾ ಏರ್ ಬೇಸ್‌ಗೆ  ಇತ್ತೀಚಿಗೆ ಬಂದಿಳಿದಿದ್ದಾರೆ.   

ಕಳೆದ ವರ್ಷದ ಫೆಬ್ರವರಿಯಲ್ಲಿ  ಪಾಕಿಸ್ತಾನಕ್ಕೆಸೇರಿದ  ಯುದ್ದ ವಿಮಾನ  ದ್ವಂಸಗೊಳಿಸಿದ ಸಂದರ್ಭದಲ್ಲಿ    ಪಾಕಿಸ್ತಾನದ ಭೂಮಿಯಲ್ಲಿ ಇಳಿದು  ಕೆಲವು ದಿನಗಳ   ಆ ದೇಶದ  ವಶದಲ್ಲಿದ್ದ   ವಿಂಗ್ ಕಮಾಂಡರ್ ಅಭಿನಂದನ್ ಅವರೊಂದಿಗೆ ಯುದ್ದ ವಿಮಾನದಲ್ಲಿ ಅವರು ಅಂಬಾಲಾಕ್ಕೆ ಆಗಮಿಸಿದರು 


ವಾರಣಾಸಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಶಿವಾಂಗಿ ಸಿಂಗ್ ಬನಾರಸ್ ಹಿಂದೂ ವಿಶ್ವವಿದ್ಯಾಲಯ  ಪದವಿ ಪಡೆದಿದ್ದಾರೆ. ಅವರು 7 ನೇ ಯುಪಿ  ಏರ್ ಸ್ಕ್ವಾಡ್ರನ್ ನಲ್ಲಿ  ಎನ್‌ಸಿಸಿ ಕೆಡೆಟ್ ಆಗಿದ್ದು,  2016 ರಿಂದ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಹಳೆ ಕಾಲದ  ಮಿಗ್ -21 ಯುದ್ಧ ವಿಮಾನದಿಂದ  ಆರಂಭಗೊಂಡ  ಅವರ  ತರಬೇತಿ, ಪ್ರಸ್ತುತ    ಹೊಸ ಪೀಳಿಗೆಯ ರಫೆಲ್ ಯುದ್ಧ ವಿಮಾನದವರೆಗೆ ಮುಂದುವರಿದಿದೆ.

ಸುದ್ದಿ ಓದಿ