ರಾಷ್ಟ್ರೀಯ

ರೈತರ ಪ್ರತಿಭಟನೆ; ಪಂಜಾಬ್ ಸಿಎಂ ಜೊತೆ ಅಮಿತ್ ಶಾ ಮಹತ್ವದ ಮಾತುಕತೆ

ರೈತರ  ಪ್ರತಿಭಟನೆ; ಪಂಜಾಬ್ ಸಿಎಂ ಜೊತೆ   ಅಮಿತ್ ಶಾ  ಮಹತ್ವದ ಮಾತುಕತೆ

ನವದೆಹಲಿ,  ಡಿ 3: ಕೇಂದ್ರ ಸರ್ಕಾರದ  ನೂತನ  ಮೂರು  ಕೃಷಿ ಕಾಯ್ದೆಗಳ   ವಿರುದ್ದ  ಪ್ರತಿಭಟನೆ ನಡೆಸುತ್ತಿರುವ  ರೈತರೊಂದಿಗೆ  ಎರಡನೇ  ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ   ಸಿದ್ಧತೆ ನಡೆಸುತ್ತಿರುವಾಗ   ಗೃಹ ಸಚಿವ  ಅಮಿತ್ ಶಾ   ಮಹತ್ವದ ಮಾತುಕತೆ  ನಡೆಸುತ್ತಿದ್ದಾರೆ.   ಮೊದಲು   ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್  ರನ್ನು   ಭೇಟಿಯಾದ  ಅಮಿತ್ ಶಾ,    ಸ್ವಲ್ಪ ಸಮಯದ ನಂತರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ರೈತರ ಸಮಸ್ಯೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಬಂಧ  ಅಮಿತ್ ಶಾ   ಈ ನಾಯಕರೊಂದಿಗೆ  ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.   ರೈತರ ಪ್ರತಿಭಟನೆಗೆ ಬಹಿರಂಗ  ಬೆಂಬಲ ವ್ಯಕ್ತಪಡಿಸಿರುವ  ಪಂಜಾಬ್ ಮುಖ್ಯಮಂತ್ರಿ,   ಕೇಂದ್ರದ ಕೃಷಿ  ಕಾಯ್ದೆಗಳನ್ನು ವಿರೋಧಿಸಿ  ರಾಜ್ಯ ವಿಧಾನಸಭೆಯಲ್ಲಿ ಹಲವು  ಕಾಯ್ದೆಗಳನ್ನು  ಅಂಗೀಕರಿಸಲಾಗಿದೆ.   ಸಭೆಯ  ನಂತರ  ಮಾತನಾಡಿದ  ನರೇಂದ್ರ ಸಿಂಗ್ ತೋಮರ್. ಶೀಘ್ರದಲ್ಲೇ ಈ ಸಮಸ್ಯೆಗೆಪರಿಹಾರ  ಲಭಿಸಲಿದೆ   ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮತ್ತೊಂದು ಕಡೆ   ಸರ್ಕಾರದೊಂದಿಗೆ  ಚರ್ಚೆ ನಡೆಸಲು   40 ರೈತ  ಸಂಘಟನೆಗಳ  ಪ್ರತಿನಿಧಿಗಳು  ದೆಹಲಿಯ ವಿಜ್ಞಾನ ಭವನಕ್ಕೆ ಆಗಮಿಸಿದ್ದಾರೆ.   ಗುರುವಾರ   ಅಪರಾಹ್ನ  ಕೇಂದ್ರ  ಸಚಿವರನ್ನು  ಅವರ  ಭೇಟಿಯಾಗಲಿದ್ದಾರೆ. ಹೊಸ ಕಾನೂನುಗಳ ಜೊತೆಗೆ, ವಿದ್ಯುತ್ ತಿದ್ದುಪಡಿ ಮಸೂದೆಯನ್ನು  ಹಿಂಪಡೆಯುವಂತೆ  ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ  ಈಗಾಗಲೇ  ಈ ಸಂಬಂಧ ತಮ್ಮ ಆಕ್ಷೇಪಣೆಯನ್ನು   ರೈತರು  ಕೇಂದ್ರಕ್ಕೆ ಲಿಖಿತವಾಗಿ ಸಲ್ಲಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಣರಾಜ್ಯೋತ್ಸವದ  ಕಾರ್ಯಕ್ರಮದಲ್ಲೂ   ಪ್ರತಿಭಟನೆ  ನಡೆಸಲಾಗುವುದು   ಎಂದು  ಎಚ್ಚರಿಕೆ  ನೀಡಿದ್ದಾರೆ.

ರೈತರೊಂದಿಗೆ   ಕೇಂದ್ರ  ನಡೆಸುತ್ತಿರುವ  ಚರ್ಚೆಗಳಗೆ   ಪ್ರತಿಕ್ರಿಯಿಸಿರುವ   ಕಾಂಗ್ರೆಸ್ ನಾಯಕ ರಾಹುಲ್  ಗಾಂಧಿ ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸದೆ,  ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಇಡೀ  ಭಾರತವನ್ನು,  ದೇಶದ ಜನರನ್ನು   ಮೋಸಗೊಳಿಸಿದಂತಾಗುತ್ತದೆ  ಎಂದು ಹೇಳಿದ್ದಾರೆ.

ಸುದ್ದಿ ಓದಿ