ರಾಷ್ಟ್ರೀಯ

ಅನ್ನದಾತನ ಬೆಂಬಲಕ್ಕೆ ಇತರೆ ಸಮುದಾಯ ನಿಲ್ಲಬೇಕು : ಸಾಯಿನಾಥ್

ಅನ್ನದಾತನ  ಬೆಂಬಲಕ್ಕೆ ಇತರೆ ಸಮುದಾಯ ನಿಲ್ಲಬೇಕು : ಸಾಯಿನಾಥ್

ನವದೆಹಲಿ, ಡಿ  3 :ಕೇಂದ್ರದ ಕೃಷಿ ಸುಧಾರಣಾ ತಿದ್ದುಪಡಿ  ಕಾಯ್ದೆ ರದ್ಪಡಿಸಬೇಕೆಂದು ದೆಹಲಿ ಗಡಿಯಲ್ಲಿ ವಿವಿಧ ರೈತ ಸಂಘಟನೆಯ ಸಾವಿರಾರು  ರೈತರು ಕಳದೆ 8 ದಿನಗಳಿಂದ  ನಡೆಸುತ್ತಿರುವ ಪ್ರತಿಭಟನೆಗೆ ಸಮಾಜದ ಇತರೆ,  ಕೃಷಿಯೇತರ ಸಮುದಾಯ  ಸಹ ಬೆಂಬಲ ನೀಡಬೇಕಾದ ಕಾಲ ಬಂದಿದೆ  ಎಂದು  ಹೆಸರಾಂತ  ಕೃಷಿ  ಪತ್ರಕರ್ತ ಪಿ.ಸಾಯಿನಾಥ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದರೆ, ಯಾರೂ ವಿರೋಧಿಸಲು ಸಾಧ್ಯವಾಗುವುದಿಲ್ಲ ಎಮದು ಸಮಯ ನೋಡಿ ಕಾಯಿದೆ ತರಲಾಗಿದೆ ಮೇಲಾಗಿ ಕೊರೋನ ಸಮಯದಲ್ಲಿ ಜನತೆ  ಪ್ರತಿಭಟನೆ ನಡೆಸುವುದಿಲ್ಲ ಎಂಬ  ದುರುದ್ದೇಶ ಸಹ ಇದರ ಹಿಂದೆ ಅಡಗಿರಬಹುದು  ಎಂಬ ಶಂಕೆ  ವ್ಯಕ್ತಪಡಿಸಿದರು.

 

ಸರ್ಕಾರ ತಪ್ಪು ಲೆಕ್ಕಾಚಾರ ಮಾಡಿ, ಈ ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತಂದಿದೆ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ವಿವಿಧ ನಾಗರಿಕ ಸಂಘಟನೆಗಳು ಆಯೋಜಿಸಿದ್ದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲಕ್ಷಾಂತರ ಕಾರ್ಮಿಕರು, ತಮ್ಮ ಕಾರ್ಮಿಕ ಸಂಘಟನೆಗಳು ಮೂಲಕ ಈಗಾಗಲೇ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಈಗ ಸಮಾಜದಲ್ಲಿರುವ ಕೃಷಿಯೇತರರು ಕರೇತರ ವರ್ಗದವರು ರೈತರನ್ನು ಬೆಂಬಲಿಸುವ ಸಮಯ ಬಂದಿದೆ' ಎಂದು ಹೇಳಿದರು.

ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಜಾಬ್ -ಹರಿಯಾಣ ಮತ್ತು ಉತ್ತರ ಪ್ರದೇಶ ಸೆರಿದಂತೆ ವಿವಿಧ  ರಾಜ್ಯಗಳ   ಸಾವಿರಾರು ರೈತರು ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ಬೆಲೆ  ಕಾಯಿದೆಯನ್ನು  ರದ್ದುಪಡಿಸಿ,   ರೈತರನ್ನು ಕಾರ್ಪೊರೇಟ್ ಕಂಪನಿಗಳ ಕೆಲಸದಾಳುಗಳನ್ನಾಗಿ ಮಾಡಲಿವೆ  ಎಂಬ  ಆತಂಕವನ್ನು ರೈತ ಸಮುದಾಯ  ವ್ಯಕ್ತಪಡಿಸುತ್ತಿದೆ.

 

ಸುದ್ದಿ ಓದಿ