ಅರ್ಥಪೂರ್ಣ ಆಚರಣೆಗಾಗಿ ಕಣ್ಣಿನ ತಪಾಸಣೆ ಕಾರ್ಯಕ್ರಮ
ಶಿಗ್ಗಾವಿ 26: ಕ್ಷೇತ್ರದ ಜನರ ಆರೋಗ್ಯದ ಚಿಂತನೆಯ ಕನಸಿನಂತೆ ಬೊಮ್ಮಾಯಿಯವರ 63 ನೇ ಹುಟ್ಟು ಹಬ್ಬದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದೆ, ಬೊಮ್ಮಾಯಿಯವರ ಹುಟ್ಟು ಹಬ್ಬಕ್ಕೆ ಅರ್ಥ ಬರಬೇಕಾದರೆ ಈ ರೀತಿ ಕಾರ್ಯಕ್ರಮಗಳು ಅವಶ್ಯವಾಗಿವೆ ಆ ನಿಟ್ಟಿನಲ್ಲಿ ಆರೋಗ್ಯ ಶಿಬಿರದಿಂದ ನೂರಾರು ಜನರು ಕಣ್ಣಿನ ತಪಾಸಣೆಯ ಲಾಭ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಸಿಎಂ ಬೊಮ್ಮಾಯಿಯವರ ನಿವಾಸದ ಸಭಾಭವನದಲ್ಲಿ ನಾರಾಯಣ ನೇತ್ರಾಲಯ ಹಾಗೂ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಿಎಂ ಬೊಮ್ಮಾಯಿಯವರ 63 ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಓದ್ಯೋಗಿಕವಾಗಿ ಹಲವಾರು ಅಭಿವೃದ್ದಿ ಕಾರ್ಯಗಳು ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಆಗಿದ್ದು ಅದರ ಭಾಗವಾಗಿ ಸಿಎಂ ಬೊಮ್ಮಾಯಿಯವರ ಅಭಿಮಾನಿ ಬಳಗ ಅವರ 63 ನೇ ಹುಟ್ಟು ಹಬ್ಬದ ಅಂಗವಾಗಿ ಇದೇ ಜ. 28 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಅಭಿವೃದ್ದಿ ಕಾರ್ಯಗಳನ್ನ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಸವಣೂರ ಬಿಜೆಪಿ ಅದ್ಯಕ್ಷ ಗಂಗಾಧರ ಬಾಣದ ಪ್ರಾಸ್ತಾವಿಕವಾಗಿ ಮಾತನಾಡಿ ಅರ್ಥಪೂರ್ಣ ಹುಟ್ಟುಹಬ್ಬದ ಅಂಗವಾಗಿ ಈ ಶಿಬಿರ ಹಮ್ಮಿಕೊಂಡಿದೆ, ಇದು ನಿರಂತರವಾಗಿರುತ್ತದೆ, ಜೀವನದಲ್ಲಿ ಪ್ರತಿಯೋಬ್ವರಿಗೂ ಕಣ್ಣು ಬಹಳ ಅವಶ್ಯವಾಗಿದೆ ಆದ್ದರಿಂದ ಅವರ ಅಭಿಮಾನಿ ಬಳಗ ಅರಿತು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಡಾ. ಜಗಲಿ ಮಾತನಾಡಿದರು, ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನರು ಚಿಕಿತ್ಸೆಗೆ ಒಳಪಟ್ಟರು, ಅದರಲ್ಲಿ 80 ಕ್ಕು ಹೆಚ್ಚು ಜನರನ್ನು ಕಣ್ಣಿನ ಪೊರೆ ಚಿಕಿತ್ಸೆಗೆ ಒಳಪಡಿಸಲು ಸೂಚಿಸಲಾಯಿತು. ಶಿಭಿರದಲ್ಲಿ ವಿರೇಶ ಆಜೂರ, ಬಸನಗೌಡ ಮೇಲಿನಮನಿ, ರೇಣುಕನಗೌಡ ಪಾಟೀಲ, ಪ್ರಕಾಶ ವೇರ್ಣೆಕರ, ಸುಭಾಸ್ ಚೌಹಾಣ್, ಸಂಗೀತ ವಾಲ್ಮೀಕಿ, ಬಸವರಾಜ ನಾರಾಯಣಪೂರ, ಡಾ. ಕೃತಿಕಾ ಸೇರಿದಂತೆ ನಾರಾಯಣ ನೇತ್ರಾಲಯದ ವೈದ್ಯ ಸಿಬ್ಬಂದಿಗಳು, ವೈದ್ರು ಇದ್ದರು.