ಸಿಂಧಗಿ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆಯಿದೆ: ರುದ್ರಗೌಡರ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆಯಿದೆ: ರುದ್ರಗೌಡರ

ಸಿಂದಗಿ:  ರಾಜ್ಯದ ಪಂಚಮಸಾಲಿ ಸಮಾಜದ ಬಾಂಧವ್ಯವನ್ನು ಉಳಿಸಿಕೊಳ್ಳಲು ಈ ಸಮಾಜಕ್ಕೆ 2ಎ ಮೀಸಲಾತಿ ನೀಡುವುದು ಸರಕಾರಕ್ಕೆ ಅನಿವಾರ್ಯತೆಯಿದೆ ಕೊನೆಯ ಹಂತದಲ್ಲಿ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ದ್ರಾಕ್ಷಿ ಬೆಳೆ ಅಭಿವೃದ್ಧಿ ನಿಗಮದ ಅದ್ಯಕ್ಷ ಎಂ.ಎಸ್.ರುದ್ರಗೌಡರ ವಿವರಿಸಿದರು.

         ತಾಲೂಕು ಪಂಚಮಸಾಲಿ ಸಮಾಜ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಂಚಮಸಾಲಿ ಸಮಾಜದ ಕುಲಗುರುಗಳು ಕೂಡಲ ಸಂಗಮದಿಂದ ಪಾದಯಾತ್ರೆ ನಡೆಸಿ ಮತ್ತೆ ಬೆಂಗಳೂರಿನಲ್ಲಿ ಸುಮರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಿದ್ದು ಸರಕಾರಕ್ಕೆ ನುಂಗಲಾರದ ತುಂತ್ತಾಗಿ ಪರಿಣಮಿಸಿದೆ ಅಲ್ಲದೆ ಮೀಸಲಾತಿ ಕಡೆಗಣಿಸಿದರೆ  ಉತ್ತರ ಕನರ್ಾಟಕದಲ್ಲಿ ಸುಮಾರು 8 ರಿಂದ 9 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಪರಿಕಲ್ಪನೆಯು ಕೂಡಾ ಸರಕಾರಕ್ಕಿದೆ ಆ ಕಾರಣಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ಮೀಸಲಾತಿ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಇದರ ಬಗ್ಗೆ ಬಸವನಗೌಡ ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿಸಿದರು.

         ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಮಿಸಲಾತಿ ಹೋರಾಟ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ, ಸಂಗನಗೌಡ ಪಾಟೀಲ ಇದ್ದರು.     


ಸುದ್ದಿ ಓದಿ