ಬೈಲಹೊಂಗಲ

ಬಿಜೆಪಿ ಸಂಘಟನಾತ್ಮಕ ಮುನ್ನಡೆಸಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು

ಬಿಜೆಪಿ ಸಂಘಟನಾತ್ಮಕ ಮುನ್ನಡೆಸಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು

ಬೈಲಹೊಂಗಲ ೧೦:  ತಳಮಟ್ಟದ ಸಂಘಟನೆಯ ಮೂಲಕ ಭಾರತೀಯ ಜನತಾ ಪಕ್ಷವನ್ನು ಸಂಘಟನಾತ್ಮಕವಾಗಿ ಮುನ್ನಡೆಸಲು ತಾವೆಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ ಹೇಳಿದರು

ಅವರು ಬುಧವಾರ ಪಟ್ಟಣದ ವಿಜಯ ಸೊಶಿಯಲ್ ಕ್ಲಬನಲ್ಲಿ ನಡೆದ ಬಿಜೆಪಿ ಮಂಡಲದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಮುಂಬರುವ ಲೋಕಸಭೆ, ಜಿಪಂ.ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲು ನಾವೆಲ್ಲರೂ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು. ಭೇದ-ಭಾವ ಮರೆತು ನಾವೆಲ್ಲರೂ ಒಂದೇ ಎನ್ನುವ ತತ್ವದಲ್ಲಿ ಪಕ್ಷವನ್ನು ಮುನ್ನಡೆಸುವ ಕೇಲಸ ಮಾಡಬೇಕು ಎಂದರು.

ಮಾಜಿ ಶಾಸಕ ಜಗದೀಶ್ ಮೆಟಗುಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ್ ಮಾತನಾಡಿದರು. 

ವೇದಿಕೆ ಮೇಲೆ ಮಂಡಲದ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ನಿಕಟಪೂರ್ವ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಪುರಸಭೆ ಸದಸ್ಯ ಗುರು ಮೆಟಗುಡ್,  ಮಹೇಶ್ ಮೋಹಿತೆ, ಗುರುಪಾದ ಕಳ್ಳಿ, ಲಕ್ಕಪ್ಪ ಕಾರಗಿ, ರತ್ನಾ ಗೋದಿ ಇದ್ದರು.

ಪುರಸಭೆ ಸದಸ್ಯ ಸಾಗರ ಬಾವಿಮನಿ, ತಾಪಂ. ಸದಸ್ಯ ಸುರೇಶ್ ಮ್ಯಾಕಲ್, ವಕೀಲ ದುಂಡೇಶ ಗರಗದ. ಸಂಚಾಲಕ ಸುನಿಲ್ ಮರಕುಂಬಿ, ನಿತಿನ್ ಚೌಗುಲೆ,  ಸುಭಾಷ ತುರಮರಿ, ಈರಣ್ಣ ಬಿಡಿ, ಶಾಂತಾ ಮಡ್ಡಿಕಾರ ಹಾಗೂ  ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಮಂಡಳ ವರದಿ ಮಂಡಿಸಿದರು. ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಜಗದೀಶ್ ಬೂದಿಹಾಳ್ ಸ್ವಾಗತಿಸಿದರು ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೇಸಾಯಿ ವಂದಿಸಿದರು.   


ಸುದ್ದಿ ಓದಿ