ಪ್ರತಿಯೊಬ್ಬರು ಕಾನೂನಿನ ಕನಿಷ್ಟ ಜ್ಞಾನ, ಅರಿವು ಹೊಂದಬೇಕು: ನ್ಯಾ ಅಣ್ಣುಗೌಡ
ಲೋಕದರ್ಶನ ವರದಿ
ರಾಣಿಬೆನ್ನೂರ 09: ಸಮಾಜದಲ್ಲಿ ಇರುವ ಪ್ರತಿಯೋಬ್ಬರು ಕಾನೂನಿನ ನ್ಯಾಯಧಾನದಿಂದ ವಂಚಿತರಾಗಬಾರದು, ಎಲ್ಲರು ಕಾನೂನಿನ ಕುರಿತಂತೆ ಜ್ಞಾನದ ಅರಿವು ಹೂಂದುವ ಉದ್ದೇಶ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಹೊಂದಿದೆ. ಬಡವರು, ನೀರ್ಗತಿಕರು, ಜನ ಸಾಮಾನ್ಯರು, ನ್ಯಾಯ ಪಡೆಯಲು ಸಾಧ್ಯವಾಗದಿದ್ದರೆ ಕಾನೂನು ಸೇವಾ ಸಮಿತಿಗೆ ಭೆಟಿ ನೀಡುವುದರ ಮೂಲಕ ಉಚಿತವಾಗಿ ನ್ಯಾಯವನ್ನು ಪಡೆಯಬಹುದಾಗಿದೆ ಎಂದು 2ನೇ ಹೆಚ್ಚುವರು ಜಿಲ್ಲಾ ವ. ಸತ್ರ ನ್ಯಾಯಾಧೀಶ ಅಣ್ಣುಗೌಡ ಪಾಟೀಲ ಕರೆ ನೀಡಿದರು.
ಅವರು ಮಂಗಳವಾರ ವಕೀಲರ ಭವನದಲ್ಲಿ ಆಜಾದಿಕಾ ಅಮೃತ ಮಹೋತ್ಸವ 75ನೇ ವರ್ಷಾಚರಣೆ ನಿಮಿತ್ತವಾಗಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಆಯೋಜಿಸಿದ್ದ, ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವರ್ಷದುದ್ದಕ್ಕೂ ನಗರವು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಧಿಕಾರದ ಉದೇಶಿತ ಉಚಿತ ಕಾನೂನು ಪಡೆಯುವ ಕುರಿತು ಅರಿವು ನೆರವು ಕಾರ್ಯಕ್ರಮದ ಮೂಲಕ ಜನಜಾಗ್ರತಿಗೂಳಿಸಲಾಗಿದೆ. ನಾಗರೀಕರು ಮತ್ತಷ್ಟು ಅರಿವನ್ನು ಹೊಂದುವ ಉದ್ದೇಶದಿಂದ ಇಂದು ನಗರದಲ್ಲಿ ದ್ವೀಚಕ್ರ ವಾಹನಗಳ ಮೂಲಕ ಮನೆ ಬಾಗಿಲಿಗೆ ಕಾನೂನು ಧ್ಯೆಯ ವಾಕ್ಯದೂಂದಿಗೆ ಜನಜಾಗ್ರತಿಗೂಳಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ, ಪಂಗಡ, ಮಾನಸಿಕ ನ್ಯೂನ್ಯತೆ ಉಳ್ಳವರು, ಕಾರ್ಮೀಕರು, ಗುಂಪು ಘರ್ಷಣೆ, ಗಲಬೆ, ಪ್ರವಾಹ, ಭೂಕಂಪ, ಸೇರಿದಂತೆ ಯಾವುದೇ ರೀತಿಯಲ್ಲಿ ನೂಂದವರು ಕಾನೂನಿನಲ್ಲಿ ಪರಿಹಾರ ಪಡೆಯಲು ಅವಕಾಶವಿದೆ ಎಂದ ಅವರು ಜನ ಸಾಮಾನ್ದಯ ಸೇವೆಯಲ್ಲಿ ಕಾನೂನಿನ ಬಾಗಿಲು ಸದಾ ತೆರೆದಿರುತ್ತದೆ ಇದರ ಪ್ರಯೋಜನವನ್ನು ಪ್ರತಿಯೊಬ್ಬ ನಾಗರೀಕರು ಯಾವುದೇ ಆರ್ಥಿಕ ವೆಚ್ಚ ಭಾರವಿಲ್ಲದೆ ಎಲ್ಲವು ಉಚಿತವಾಗಿ ಪಡೆಯಲು ಮುಂದಾಗಬೇಕು ಎಂದು ನ್ಯಾಯಾಧೀಶರು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಕೆ.ಶಿವಲಿಂಗಪ್ಪ ಅವರು ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಮಹತ್ವ ಮತ್ತು ಉದ್ದೇಶ ಕುರಿತಂತೆ ಸಾಧ್ಯಾಂತವಾಗಿ ಉಪನ್ಯಾಸ ನೀಡಿದರು.
ಸಮಾರಂಭಕ್ಕೂ ಮುನ್ನ ನಡೆದ, ವಕೀಲ ಸಮುದಾಯವು ಆಯೋಜಿಸಿದ್ದ ಬೈಕ್ ರಾ್ಯಲಿಯನ್ನು ಹಿರಿಯ ದಿವಾಣಿ ನ್ಯಾಯಾಧೀಶ, ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ ಕಮತೆ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು, ಜೆ.ವಿ. ಕುಲಕರ್ಣಿ, 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ನಿವೇದಿತಾ ಮುನವಳ್ಳಿಮಠ, ಪ್ರಧಾನ ದಿವಾಣಿ ನ್ಯಾಯಾಧೀಶ, ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ ಸಮಿತಿಯ ಯೊಗೇಶ ಜೆ, ಸೇರಿದಂತೆ ಮೂದಲಾದವರು ಜನಜಾಗೃತಿ ರಾ್ಯಲಿ ಉದ್ಘಾಟಿಸಿ ಚಾಲನೆ ನೀಡಿದರು.
ಉಪಾಧ್ಯಕ್ಷ ಕುಮಾರ ಮಡಿವಾಳರ, ಕಾರ್ಯದರ್ಶಿ ಜಿ.ಕೆ. ಮುಂಡಾಸದ, ಕಾರ್ಮಿಕ ನೀರೀಕ್ಷಕ ಬಾಲಾಜಿ ಪಿ.ಜಿ, ಸಾರಿಗೆ ಅಧಿಕಾರಿ ಭರತ್ ಎಂ. ಕಾಳಿಸಿಂಗೆ, ಆರ್.ಸಿ. ಪಾಟೀಲ, ಎಲ್.ಎಫ್.ಕೆಂಗೂಂಡ, ಹೆಚ್.ಎಸ್.ಸಿದ್ದಪ್ಪನವರ, ಸಿ.ಎಸ್, ಬುರಡಿಕಟ್ಟಿ, ವಿಠಲ್ ಪುಟಾಣಿಕೆರ, ಜಿ.ಕೆ. ತಳವಾರ, ಅರುಣ್ ಅಜ್ಜೊಡಿಮಠ, ಜಿ.ಎಂ. ನೇತ್ರಾವತಿ, ಸುಮಾ ಸಾವುಕಾರ, ಅನುಪಮಾ ಕಣವಿ, ನಾಗರತ್ನ ಮುಗಳಿಶೆಟ್ಟರ, ಸೇರಿದಂತೆ ಸಂಘದ ಇತರೆ ಸದಸ್ಯರು ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು. ಆವರಣದಿಂದ ಅರಂಭಗೂಂಡ ಬೈಕ್ ರಾ್ಯಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಭಾ ಭವನದಲ್ಲಿ ಸಾಂಗತ್ಯಗೂಂಡಿತು.