ಪ್ರತಿಯೊಬ್ಬರು ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿ: ಶಾಸಕ ವೈದ್ಯ
ಸವದತ್ತಿ: ಯಕ್ಷಗಾನವು ಬಹಳ ಪ್ರಾಚೀನವಾದ ಕಲೆಯಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸ್ಥಳೀಯ ಹೊಟೇಲ ಮಾಲೀಕರಿಂದ ಹಮ್ಮಿಕೊಂಡ ಕುಂದಾಪುರ ತಾಲೂಕಿನ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರು ಪ್ರದರ್ಶಿಸಿದ ಚೈತ್ರದ ಕೋಗಿಲೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಪ್ರತಿ ವರ್ಷ ನಮ್ಮ ತಾಲೂಕಿನಲ್ಲಿನ ಹೊಟೇಲ್ಗಳ ಮಾಲಿಕರು ಸೇರಿಕೊಂಡು ಉಡುಪಿ ಭಾಗದ ಯಕ್ಷಗಾನ ಕಲೆಯನ್ನು ಉತ್ತರ ಕನರ್ಾಟಕದ ಜನರಿಗೆ ತೋರಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸವದತ್ತಿ ಯಕ್ಷಗಾನ ಪ್ರದರ್ಶನ ಮಂಡಳ ಹಾಗೂ ಹೊಟೇಲ ಮಾಲಿಕರ ಸಂಘದ ವತಿಯಿಂದ ಶಾಸಕ ವಿಶ್ವಾಸ ವೈದ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಶಮಿ ಹಾಗೂ ಸಂಗಡಿಗರು ಭಕ್ತಿ ಗೀತೆ ಹಾಡಿದರು.
ಬಿ.ಎನ್.ಪ್ರಭುನವರ, ಸಿ ಪಿ ಐ ಕರುನೇಶಗೌಡ ಜಿ, ಗೋಪಾಲ ಶೆಟ್ಟಿ, ದಯಾನಂದ ಶೆಟ್ಟಿ, ಸಂತೋಷ ಶೆಟ್ಟಿ, ಬುಜಂಗ ಶೆಟ್ಟಿ, ಸುಧಾಕರ ಶೆಟ್ಟಿ, ಈಶ್ವರ ಶೆಟ್ಟಿ ಸೇರಿದಂತೆ ಸ್ಥಳೀಯ ಹೊಟೇಲ ಮಾಲೀಕರು ಉಪಸ್ಥಿತರಿದ್ದರು ಶಿವಾನಂದ ತಾರಿಹಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.