ಶಿಗ್ಗಾವ್

‘ಪ್ರತಿಯೊಬ್ಬರು ದೇಶಪ್ರೇಮ ಬೆಳೆಸಿಕೊಂಡು ಸೌಹಾರ್ದತೆ ಬದುಕು ರೂಢಿಸಿಕೊಳ್ಳಬೇಕು’

‘ಪ್ರತಿಯೊಬ್ಬರು ದೇಶಪ್ರೇಮ ಬೆಳೆಸಿಕೊಂಡು ಸೌಹಾರ್ದತೆ ಬದುಕು ರೂಢಿಸಿಕೊಳ್ಳಬೇಕು’

ಲೋಕದರ್ಶನ ವರದಿ 

ಶಿಗ್ಗಾವಿ 27:  ಶ್ರೇಷ್ಠ ಸಂವಿಧಾನವನ್ನು ಹೊಂದಿದ ಭಾರತ ಇಡಿ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ವನ್ನು ಹೊಂದಿದ ರಾಷ್ಟ್ರವಾಗಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾ ಸರ್ಕಾರ ಎಂಬ ಹಿನ್ನೆಲೆಯಲ್ಲಿ ಇವತ್ತು ನೈಜ ಪ್ರಜಾಸರ್ಕಾರ ಸ್ಥಾಪನೆಯತ್ತ ನಾವೆಲ್ಲರೂ ಹೆಜ್ಜೆಹಾಕಬೇಕಾಗಿದೆ, ಭಾರತದಲ್ಲಿ ಪ್ರಜಾಪ್ರಭುತ್ವ ಅದ್ಭುತ ಯಶಸ್ಸನ್ನು ಪಡೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಜು ಕುನ್ನೂರ ಹೇಳಿದರು 

ಇಂದು ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ  73 ನೆಯ ಪ್ರಜಾರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇವತ್ತು ಪ್ರತಿಯೊಬ್ಬರು ದೇಶಪ್ರೇಮವನ್ನು ಬೆಳೆಸಿಕೊಂಡು ಭಾತೃತ್ವ ಹಾಗೂ ಸೌಹಾರ್ಧತೆಯ ಬದುಕನ್ನು ರೂಢಿಸಿಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸಾಮಾನ್ಯರು ಅಸಾಮಾನ್ಯರಾಗಬಹುದಾದ ಅದ್ಬುತ ಅವಕಾಶಗಳನ್ನು ಮಾಡಿಕೊಟ್ಟ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಅವರು ನಮಗಾಗಿ ಕೊಟ್ಟಿರುವ ಸಂವಿಧಾನ ರಕ್ಷಿಸಿ ದೇಶ ಉಳಿಸಬೇಕಾಗಿದೆ ಎಂದು ಹೇಳಿದರು 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಅವರು ಇವತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೇ​‍್ರಮ ತುಂಬಬೇಕಾದ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು 

ಪ್ರಾರಂಭದಲ್ಲಿ ಅನಿಲ ನಾಯ್ಕರ ಸ್ವಾಗತಿಸಿದರು, ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ ವಂದಿಸಿದರು. ಪ್ರೊ. ಕೆ. ಬಸಣ್ಣ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ