ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿಯಾಗಬೇಕು: ಕಲಕೋಟಿ
ಲೋಕದರ್ಶನ ವರದಿ
ಶಿಗ್ಗಾವಿ : ಪುರಷ ಪ್ರಧಾನವಾದ ಭಾರತ ದೇಶದಲ್ಲಿ ಮಹಿಳೆಯರು, ತಮ್ಮ ಸಾಧನೆ ಮೂಲಕ ದೇಶಕ್ಕೆ ಇತಿಹಾಸದ ಭಾಗವಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ವೀರ ಕಿತ್ತೂರು ಚನ್ನಮ್ಮ, ಓನಕೆ ಒಬವ್ವ ಸೇರಿದಂತೆ ಮೊದಲಾದ ಮಹಿಳೆಯರ ಸಾಧನೆ ಸ್ಮರಣೀಯವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ಧರಾಜ ಕಲಕೋಟಿ ತಿಳಿಸಿದರು.
ಬಂಕಾಪುರ ಪಟ್ಟಣದ ಪ್ರಭಂಜನ್ ಗಾರ್ಮೆಂಟ್ ಇಂಡಸ್ಟ್ರಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ರಂಗದಲ್ಲಿಯೂ ಪುರಷರ ಸಮನಾಗಿ ಅವಕಾಶ ಕಲ್ಪಿಸಿ ಕೊಟ್ಟ ಈ ದೇಶದ ಸಂವಿಧಾನದ ಆಶಯಗಳಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಅನುಷ್ಠಾನಕ್ಕೆ ತಂದ ಸದ್ಬಳಿಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿಯಾಗಬೇಕು ಎಂದು ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ವೃತ್ತಿಪರ ಉದ್ಯೋಗಗಳಲ್ಲಿ ತಮ್ಮನ್ನು ತೊಡುಗಿಸಿಕೊಳ್ಳುವ ಮೂಲಕ ಪುರಷ ಸಮುದಾಯಕ್ಕೆ ಸವಾಲಾದ ಮಹಿಳೆ,ತನ್ನ ಕುಟಂಬದ ಜವಾಬ್ದಾರಿ ಜತೆಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ಮಹಿಳೆ ಅಬಲೆ ಅಲ್ಲ ಸಬಲೆ ಎನ್ನುವುದನ್ನು ತೊರಿದ್ದಾಳೆ. ಸಮಯ ಪ್ರಜ್ಞೆಯಿಂದ ಕೈಗೊಳ್ಳುವ ಕೆಲಸಗಳನ್ನು ಪರಿ ಪೂರ್ಣತೆಯಿಂದ ನೆರವೇರಿಸುವ ಮಹಿಳೆಯರ ಶ್ರಮ ಈ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕಲಕೋಟಿ ಅಭಿಪ್ರಾಯಿಸಿದರು.
ಪ್ರಭಂಜನ್ ಗಾರ್ಮೆಂಟ್ ಇಂಡಸ್ಟ್ರಿ ಸಿಇಓ ರಾಧಿಕಾ ಮೇಲಗೇರಿ ಅಧ್ಯಕ್ಷತೆ ವಹಿಸಿದ್ದರು. ಶಿಗ್ಗಾವಿ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನಿರ್ಮಲಾ ಪಂಚಾಕ್ಷಯ್ಯರಮಠ, ಶಕುಂತಲಾ ಕೋಣನವರ, ಎಂ.ಸಿ.ಕಣವಿ, ಡಾ.ಕೆ.ಎಂ.ಬಮ್ಮನಹಳ್ಳಿ, ಡಾ.ಆರ್.ಎಸ್ ಅರಳಲೆಹಮಠ, ಡಾ.ಚೇತನ ಕರೇಗೌಡ್ರ, ಜಿ.ಐ.ಸಜ್ಜನಗೌಡ್ರ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಮುರಿಗೇಶ ಚನ್ನೂರು, ಲಲಿತಾ ಗುಂಡಿಹಳ್ಳಿ, ಪುರಸಭೆ ಸದಸ್ಯ ರಾದ ಮಂಜುನಾಥ ತಳವಾರ, ಮಕ್ಬುಲ್ ಬಮ್ಮನಹಳ್ಳಿ, ಮಲ್ಲೇಶ ಮಾಳಗಿಮನಿ, ಯಲ್ಲಪ್ಪ ಸುಂಕದ, ಗದಿಗೆಪ್ಪ ಶೆಟ್ಟರ, ಎನ್.ವಿ.ಪದ್ಮಾ, ಸುಜಾತ ವಾಲ್ಮೀಕಿ, ಉಷಾ ಬಿಳಿಕುದರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಾರ್ಮೆಂಟ್ ಇಂಡಸ್ಟ್ರಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ನೌಕರರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಗುರುಪಾದಯ್ಯ ಸಾಲಿಮಠ ಉಪನ್ಯಾಸ ನೀಡಿದರು. ಎಂ.ಬಿ.ಉಂಕಿ ನಿರೂಪಿಸಿದರು.