ಸುವರ್ಣ ಸೌಧದ ಆವರಣದಲ್ಲಿ ರಾಣಿ ಮಲ್ಲಮ್ಮಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿ : ಬೆಳವಡಿ ಗ್ರಾಮಸ್ಥರು, ಮಲ್ಲಮ್ಮಳ ಅಭಿಮಾನಿಗಳಿಂದ ಮುಖ್ಯಮಂತ್ರಿಗಳಿಗೆ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 01: ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ರಾಣಿ ಮಲ್ಲಮ್ಮಳ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ಮಲ್ಲಮ್ಮಳ ಕುರುಹುಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಬೇಕೆಂದು ಬೆಳವಡಿ ಗ್ರಾಮಸ್ಥರು, ಮಲ್ಲಮ್ಮಳ ಅಭಿಮಾನಿಗಳು ಎಸಿ ಮೂಲಕ ಮುಖ್ಯಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಎಪಿಎಂಸಿ ಮಾಜಿ ಸದಸ್ಯ ಮಹಾರುದ್ರ್ಪ ನೆಲ್ಲಿಗೇಣಿ, ಯುವ ಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಹುಂಬಿ ಮಾತನಾಡಿ, ಸುವರ್ಣ ಸೌಧದ ಮುಂದೆ ಕಿತ್ತೂರ ಚನ್ನಮ್ಮಳ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಯ ಸರ್ಕಾರದ ನಿರ್ಧಾವನ್ನು ಸ್ವಾಗತಿಸುತ್ತೆವೆ ಅದೇ ರೀತಿ ತಾಲೂಕಿನ ಬೆಳವಡಿ ಗ್ರಾಮವು ಐತಿಹಾಸಿಕ ಸ್ಥಳವಾಗಿದ್ದು, ಜಗತಿನಲ್ಲಿಯೇ ್ರ್ರಥಮವಾಗಿ ಸುಸಜ್ಜಿತ ಮಹಿಳಾ ಸೈನ್ಯವನ್ನು ಕಟ್ಟಿ 1672ರಲ್ಲಿ ಜರುಗಿದ ಯುದ್ಧದಲ್ಲಿ ಬೆಳವಡಿಯ ದೊರೆ ಈಶಪ್ರಭು ವೀರ ಮರಣವನ್ನಪಿದಾಗ ರಾಣಿ ಮಲ್ಲಮ್ಮಳು ಸ್ವತ ಖಡ್ಗವನ್ನು ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ಬಲಾಢ ಸೈನ್ಯವನ್ನು ತನ್ನ ಮಹಿಳಾ ಸೈನ್ಯದೊಂದಿಗೆ ಎದುರಿಸಿ, ಮರಾಠ ಸೈನ್ಯವನ್ನು ಹಿಮ್ಮೆಟ್ಟಿಸಿ ಛತ್ರಪತಿ ಶಿವಾಜಿ ಮಹಾರಾಜರಿಂದ ಸಹೋದರಿ ಎಂದು ಗೌರಯಿಸಲ್ಪಟ್ಟು, ಹಿಂದೂ-ಮರಾಠಾ ಬಾಂದವ್ಯ ಬೆಸೆಯಲು ಕಾರಣೀ ಕರ್ತೇ ವೀರ ಧೀರ ಮಹಿಳೆ ರಾಣಿ ಬೆಳವಡಿ ಮಲ್ಲಮ್ಮಳಾಗಿದ್ದು, ಅವಳ ಶೌರ್ಯ, ಸಾಹಸ, ದೇಶಪ್ರೇಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲು ಅವಳ ಮೂರ್ತಿ ಪ್ರತಿಷ್ಠಾಪಣೆ, ಪ್ರಾಧಿಕಾರ ರಚನೆ ಅವಶ್ಯವಾಗಿದೆ ಎಂದರು.
ಸರ್ಕಾರವು ಪ್ರತಿ ವರ್ಷ ರಾಣಿ ಮಲ್ಲಮ್ಮಳ ಉತ್ಸವವನ್ನು ಫೆಬ್ರವರಿ ತಿಂಗಳಲ್ಲಿ ಆಚರಿಸುತ್ತಲಿದೆ. ಕಿತ್ತೂರ ರಾಣಿ ಚೆನ್ನಮ್ಮಳ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡುತ್ತಿಲ್ಲಿದ್ದು, ಸರ್ಕರವು ಅದೆ ರೀತಿಯಲ್ಲಿ ಬೆಳವಡಿ ರಾಣಿ ಮಲ್ಲಮ್ಮಳ ಹೆಸರಿನಲ್ಲಿ ನೀಡುವುದಾಗಬೇಕು ಎಂದು ಒತ್ತಾಯಿಸಿದರು.
ಸರಕಾರ ಮಲತಾಯಿ ಧೋರಣೆ ಮಾಡದೆ ಎಲ್ಲ ವೀರರಿಗೂ ಸಮನಾಗಿ ಗೌರವ ನೀಡಲು ಮುಂದಾಗಬೇಕೆಂದು ಅವರು ಮನವಿ ಮೂಲಕ ಆಗ್ರಹಿಸಿದರು. ಎಫ್.ವಿ. ಕರೀಕಟ್ಟಿ, ರೈತ ಸಂಘದ ಮುಖಂಡ ಗೌಡಪ್ಪ ಪಾಟೀಲ, ಉಮೇಶ ಕಿನೋರಿ, ನ್ಯಾಯವಾದಿಗಳಾದ ಶಂಕರ ಕರೀಕಟ್ಟಿ, ಕೆ.ಎಸ್. ಕುಲಕರ್ಣಿ, ಶ್ರೀಶೈಲ ಸಿದ್ದಮನಿ, ಗಂಗಾಧರ ಹೊಂಡೇದ ಶಂಕರ ಶೆಟ್ಟಿ, ಈರಣ್ಣ ಉಣಕಲ, ಶಿವಾನಂದ ಭರಮಗೌಡರ, ಹಣಮಂತ ಕಕ್ಕಯ್ಯನವರ, ರಫೀಕ ಬಡೇಘರ ಹಾಗೂ ಇತರರು ಇದ್ದರು.