ಶಿಗ್ಗಾವ್

ಪ್ರಬಂಧ ಸ್ಪರ್ಧೆ: ರಾಜ್ಯಕ್ಕೆ ಚೈತ್ರ ಪ್ರಥಮ ಸ್ಥಾನ

ಪ್ರಬಂಧ ಸ್ಪರ್ಧೆ: ರಾಜ್ಯಕ್ಕೆ ಚೈತ್ರ ಪ್ರಥಮ ಸ್ಥಾನ

ಶಿಗ್ಗಾವಿ : ತಾಲೂಕಿನ ನೀರಲಗಿ ಸರಕಾರಿ ಪ್ರೌಢಶಾಲೆ 10ನೇ ತರಗತಿಯಲ್ಲಿ ಓದುತ್ತಿರುವ ಚೈತ್ರ ಹಿಂದಿನಮನಿ 20ರಂದು ಶ್ರವಣಬೆಳಗೊಳದಲ್ಲಿ ನಡೆದ ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ ಈ ವಿದ್ಯಾರ್ಥಿಗೆ ಶಿಗ್ಗಾವ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಿಗೇರ್ ಶಾಲೆ ಮುಖ್ಯೋಪಾಧ್ಯಾಯಕುಮಾರ್ ಬಿ ಹುಲಗೂರ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರು ಸರ್ವ ಸದಸ್ಯರುಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಹಿರಿಯರು ಶಾಲೆಯ ಶಿಕ್ಷಕ ವರ್ಗಅಭಿನಂದನೆ ಸಲ್ಲಿಸಿ ಗೌರವಿಸಿದರು. ಈ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದಂತಹ ಸಮಾಜ ವಿಜ್ಞಾನ ಶಿಕ್ಷಕ ಎಸ್ ಐ ಮಡಿವಾಳರ್ ಇವರಿಗೂ ಸಹ ಅಭಿನಂದನೆಯನ್ನು ಸಲ್ಲಿಸಲಾಯಿತು. 


ಸುದ್ದಿ ಓದಿ