ಬೆಳಗಾವಿ

ಪ್ರತಿ ಪುಣ್ಯತಿಥಿಯಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ: ತುಕಾರಾಂ ಶಾಸ್ತ್ರಿ

ಪ್ರತಿ ಪುಣ್ಯತಿಥಿಯಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ: ತುಕಾರಾಂ ಶಾಸ್ತ್ರಿ
Environmental conservation through sapling planting on every death anniversary: ​​Tukaram Shastri

ಸಂಬರಗಿ ಸೆ. 5: ಮಾನವ ಧರ್ಮದಲ್ಲಿ ಜನನ ಅನಿಶ್ಚಿತ, ಸಾವು ನಿಶ್ಚಿತ. ಈ ಎರಡೂ ಅವಧಿಗಳ ನಡುವೆ ನಾವು ಮಾಡುವ ಕೆಲಸ ಮಾತ್ರ ಜೀವಂತವಾಗಿರುತ್ತದೆ. ಮರಣದ ನಂತರ ಪ್ರತಿಯೊಬ್ಬ ವ್ಯಕ್ತಿಯ ದಹನದ ಬಳಿಕ ಅವರ ಸ್ಮರಣಾರ್ಥ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ನ್ಯೂ ಇಂಗ್ಲಿಷ್ ಸ್ಕೂಲ್ ಜಿಗ್ಯಾಳದ ಶಾಲೆಯ ಮಾಜಿ ಪ್ರಾಂಶುಪಾಲ ತುಕಾರಾಂ ಶಾಸ್ತ್ರಿ ಹೇಳಿದರು.  

ಮಹಾರಾಷ್ಟ್ರದ ಏಕೊಂಡಿ ಗ್ರಾಮದಲ್ಲಿ ಸತ್ಯವಾ ನಾಗಪ್ಪ ಕಾಂಬಳೆ ಅವರ ಪ್ರಥಮ ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯೂ ಬಡತನದಿಂದ ಶ್ರೀಮಂತನಾಗುತ್ತಾನೆ. ಆದರೆ ಅವರು ಮಾಡಿದ ಸತ್ಕಾರ್ಯಗಳು ಮಾತ್ರ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದರು.  

ಪ್ರತಿ ಪುಣ್ಯತಿಥಿಯಂದು ಒಂದು ಸಸಿ ನೆಡುವ ಮೂಲಕ ನಾವು ಬದುಕಿರುವ ಜೀವನದಲ್ಲಿ ಸುಂದರವಾದ ಮರಗಳನ್ನು ಸೃಷ್ಟಿಸಬಹುದು. ಪ್ರತಿಯೊಬ್ಬರೂ ಇದನ್ನು ಕಾರ್ಯರೂಪಕ್ಕೆ ತಂದರೆ ಮರಗಳ ಪ್ರಮಾಣ ಹೆಚ್ಚಾಗಿ, ಮಳೆಯ ಪ್ರಮಾಣವೂ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶ್ಯಾಮರಾವ್ ಕಳಕೆ, ಪೋಪಟ್ ಟಾಕಳೆ, ಸುಭಾಷ್ ಕಾಂಬಳೆ, ರಾಜು ಕಾಂಬಳೆ, ಕಿರಣ್ ಶಾಸ್ತ್ರಿ, ಶ್ರೀಕಾಂತ ಕಾಂಬಳೆ, ಮನೋಹರ ಮೇಲ್ಗಡೆ, ವಿಠಲ ಮೇಲ್ಗಡೆ, ರೋಷನ್ ಕಾಂಬಳೆ, ರಾಕೇಶ್ ಕಾಂಬಳೆ, ನರಸಿಂಗ್ ಕಾಂಬಳೆ ಹಾಗೂ ಅಶೋಕ ಕಾಂಬಳೆ ಉಪಸ್ಥಿತರಿದ್ದರು. 


ಸುದ್ದಿ ಓದಿ